ಕ್ರಿಯಾಶೀಲರನ್ನು ಗುರುತಿಸುವ ಕಾರ್ಯ ಸರ್ಕಾರದಿಂದ ಆಗಬೇಕು

yashaswi
Published on

ಕೋಟ: ಇಳಿ ವಯಸ್ಸಿನಲ್ಲಿಯೂ ಕ್ರಿಯಾಶೀಲರಾಗಿರಬೇಕಾದರೆ ಕಲೆಯ ಹಾಗೂ ಇನ್ನಿತರ ಸಂಘಟನೆ ಮುಖ್ಯಸ್ಥರಾಗಿದ್ದಾಗ ಮಾತ್ರ ಸಾಧ್ಯ. ಇಂತಹ ಕ್ರಿಯಾಶೀಲರನ್ನು ಗುರುತಿಸುವ ಕಾರ್ಯ ಸರ್ಕಾರದಿಂದ ಆಗಬೇಕು ಎಂದು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಸರಂಗಪ್ರಸ್ತುತಿ ಪಡಿಸಿದ ಯಕ್ಷಗಾನ ಹನುಮದ್ವಿಲಾಸ ಪ್ರದರ್ಶನ ಸಂದರ್ಭ ಯಶಸ್ವಿ ಕಲಾವೃಂದ ಸಹಕಾರದೊಂದಿಗೆ ಯಕ್ಷಗಾನದ ಕಲಾವಿದ ಚಂದ್ರ ಕುಲಾಲ್ ನೀರ್ಜಡ್ಡು ಹಾಗು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದಯ್ ಹೊಸಾಳ ಅವರನ್ನು ಅಭಿನಂದಿಸಿ ಮಾತನಾಡಿದರು.

ಮಂಗಳೂರು ಯಕ್ಷಧಾಮದ ಜನಾರ್ದನ ಹಂದೆ, ಯಕ್ಷಗಾನದ ಅಭಿಮಾನಿ ಮೋಹನಚಂದ್ರ ಪಂಜಿಗಾರು, ಸಕು ರಮೇಶ್, ವೀಣಾ ಕಾರಂತ್, ರಜನಿ ಹಂದೆ, ಗಾಯತ್ರಿ ಹೆಬ್ಬಾರ್, ಪಿ.ಶ್ರೀಧರ ಹಂದೆಯವರ ಪುತ್ರಿಯರು ಉಪಸ್ಥಿತರಿದ್ದರು. ಪಾರ್ವತಿ ಮಯ್ಯ, ನಮನ ಹೇರ್ಳೆ, ಸನ್ಮಾನ ಪತ್ರ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net