

ಕಾರ್ಕಳ: ಕೊರಗ ಸಂಘಗಳ ಒಕ್ಕೂಟ ಸಮುದಾಯದ ಪ್ರಮುಖ ಬೇಡಿಕೆಯಾದ ಭೂಮಿ ಕುರಿತು ಕಾರ್ಕಳ ತಾಲೂಕು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಬಂಡಿಮಠದಲ್ಲಿರುವ ಹದಿಮೂರು ಕುಟುಂಬಗಳ ನಿವೇಶನ ಹಕ್ಕು ಪತ್ರಕ್ಕಾಗಿ ಮನವಿ ನೀಡಿ ದರ್ಖಾಸು ಭೂಮಿ ಅರ್ಜಿಗಳ ವಿಷಯವಾಗಿ ತಹಸೀಲ್ದಾರ್ ಅವರೊಂದಿಗೆ ಮಾತುಕತೆ ನಡೆಸಲಾಯಿತು. ಜನವರಿ ನಾಲ್ಕರಂದು ಇಲಾಖೆ ವತಿಯಿಂದ ನಡೆಸುವ ಅಕ್ರಮ ಸಕ್ರಮ ಸಭೆಯಲ್ಲಿ ಕೊರಗರ ಅರ್ಜಿಗಳನ್ನು ವಿಶೇಷವಾಗಿ ಪರಿಗಣಿಸಿ ಸಮಸ್ಯೆ ಪರಿಹರಿಸಲಾಗುವುದು ಹಾಗೂ ಮುಂದಿನ ಹತ್ತು ದಿನಗಳ ಬಳಿಕ ತಹಸೀಲ್ದಾರರ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿ, ಶೀಘ್ರವಾಗಿ ಸಮಸ್ಯೆ ಪರಿಹರಿಸಲಾಗುವುದು ಎಂದು ತಹಸೀಲ್ದಾರ್ ಭರವಸೆ ನೀಡಿದರು.
ಒಕ್ಕೂಟ ಪ್ರಮುಖರಾದ ಪುತ್ರನ್ ಹೆಬ್ರಿ, ನರಸಿಂಹ ಪೆರ್ಡೂರು, ಶೇಖರ್ ಕೆಂಜೂರು, ಅಮರ್ ಪಳ್ಳಿ ಹಾಗೂ ಕಾರ್ಕಳ ಬಂಡಿಮಠದ ಸುನಂದಾ, ಲೀಲಾ, ಲಲಿತಾ, ಚಂದ್ರಾವತಿ, ಶಕುಂತಲಾ, ಗಣೇಶ್, ವಸಂತ, ಪ್ರಸಾದ್, ಶಶಿಕಲಾ ನಕ್ರೆ, ಅಕ್ಕು ತೆಳ್ಳಾರ್ ಮತ್ತಿತರರು ಉಪಸ್ಥಿತರಿದ್ದರು.