ಕಾರ್ಕಳ: ಪ್ರೀತಿ ನೀಡುವ ಮತ್ತು ಹರಡುವ ಮನೋಭಾವದ ಬಗ್ಗೆ ಸ್ಫೂರ್ತಿದಾಯಕ ಚಿಂತನೆ ನಡೆಸುವುದು ಅನುಸರಣೀಯ ಎಂದು ಅತ್ತೂರು ಸಂತ ಲಾರೆನ್ಸ್ ಬೆಸಿಲಿಕಾದ ಸಹಾಯಕ ಧರ್ಮಗುರು ಲ್ಯಾರಿ ಪಿಂಟೋ ಹೇಳಿದರು.
ನಿಟ್ಟೆ ಕಾಲೇಜು ಕ್ಯಾಂಪಸ್‌ನಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಸೇಂಟ್ ಲಾರೆನ್ಸ್ ಬೆಸಿಲಿಕಾದ ಡಿಎನ್.ವಾಲೇಶ್ ಅರಾನ್ಹಾ ಮತ್ತು ನಿಟ್ಟೆ ಹಾಸ್ಟೆಲ್ ಮಾಜಿ ಹಿರಿಯ ವ್ಯವಸ್ಥಾಪಕ ಜಾನ್ ಡಿಸೋಜ ಅವರು ಉತ್ಸವದ ಬಗ್ಗೆ ಮತ್ತು ಸಮುದಾಯ ಒಗ್ಗೂಡಿಸುವಲ್ಲಿ ಅದರ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು.
ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಆಫ್ ಕ್ಯಾಂಪಸ್ ಸೆಂಟರ್ ನಿರ್ದೇಶಕ (ಕ್ಯಾಂಪಸ್ ನಿರ್ವಹಣೆ ಮತ್ತು ಅಭಿವೃದ್ಧಿ) ಎ.ಯೋಗೀಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ವಿವಿಧ ಅಂಗಸಂಸ್ಥೆಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.