Govt School : ಸರ್ಕಾರಿ ಶಾಲೆಗಳೆಂದರೆ ಇಂದು ತಾತ್ಸಾರ ಮನೋಭಾವವೇ ಜಾಸ್ತಿ. ಹೀಗಾಗಿ ಅನೇಕ ರಾಜ್ಯದ ಕೆಲವು ಭಾಗಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ವಿದ್ಯಾರ್ಥಿಗಳ ಕೊರತೆಯಿಂದಾಗಿ ಸರ್ಕಾರ ಶಾಲೆಗಳನ್ನು ಸಂಪೂರ್ಣವಾಗಿ ಮುಚ್ಚುತ್ತಿದೆ.
ಅದೇ ರೀತಿ, ತೆಲಂಗಾಣದ ಖಮ್ಮಮ್ ಜಿಲ್ಲೆಯ ಶಾಲೆಯೊಂದರಲ್ಲಿ ಒಬ್ಬಳೇ ವಿದ್ಯಾರ್ಥಿನಿ ಇದ್ದಾಳೆ. ಈ ಒಂದು ನೆಪ ಮಾಡಿಕೊಂಡು ಸರ್ಕಾರಿ ಶಾಲೆಯನ್ನು ಮುಚ್ಚಲು ಶಿಕ್ಷಣ ಅಧಿಕಾರಿಗಳು ಸಿದ್ಧರಾಗಿದ್ದರು. ಆದರೆ, ಆ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯ ತಂದೆ ತೆಗೆದುಕೊಂಡ ನಿರ್ಧಾರದ ನಂತರ ಅಧಿಕಾರಿಗಳು ಹಿಂದೆ ಸರಿದಿದ್ದಾರೆ. ಇದಲ್ಲದೆ, ಶಾಲೆಯಲ್ಲಿ ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಮೂಲಕ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.
ಖಮ್ಮಮ್ ಜಿಲ್ಲೆಯ ವೈರಾ ಮಂಡಲದ ನರಪುನೇನಿಪಲ್ಲಿ ಗ್ರಾಮದಲ್ಲಿ ಒಂದು ಹಿರಿಯ ಪ್ರಾಥಮಿಕ ಶಾಲೆ ಇದೆ. 2018ರಲ್ಲಿ ಈ ಶಾಲೆಯಲ್ಲಿ 24 ವಿದ್ಯಾರ್ಥಿಗಳು ಮತ್ತು ಐದು ಶಿಕ್ಷಕರು ಇದ್ದರು. 2022-23 ರಲ್ಲಿ ಈ ಸಂಖ್ಯೆ ಎಂಟಕ್ಕೆ ಮತ್ತು 2023-24 ರಲ್ಲಿ ನಾಲ್ಕಕ್ಕೆ ಇಳಿಯಿತು. ಇದರೊಂದಿಗೆ, ಒಬ್ಬ ಮಹಿಳಾ ಶಿಕ್ಷಕಿಯನ್ನು ಹೊರತುಪಡಿಸಿ, ಉಳಿದವರನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಡೆಪ್ಯುಟೇಶನ್ ಮೇಲೆ ಇತರ ಶಾಲೆಗಳಿಗೆ ಕಳುಹಿಸಿದರು.
ಈ ಶೈಕ್ಷಣಿಕ ವರ್ಷದಲ್ಲಿ, ಆ ಶಾಲೆಯಲ್ಲಿ ನಾಲ್ಕನೇ ತರಗತಿಯ ಕೀರ್ತನಾ ಹೆಸರಿನ ವಿದ್ಯಾರ್ಥಿನಿ ಮಾತ್ರ ಉಳಿದುಕೊಂಡಿದ್ದಾಳೆ. ವಿದ್ಯಾರ್ಥಿಗಳ ಕೊರತೆಯಿಂದಾಗಿ, ಅಧಿಕಾರಿಗಳು ಶಾಲೆಯನ್ನು ಮುಚ್ಚಲು ಸಿದ್ಧತೆ ನಡೆಸಿದ್ದಾರೆ. ಈ ವಿಚಾರ ಗೊತ್ತಾದ ಕೂಡಲೇ ಶಿಕ್ಷಣ ಇಲಾಖೆಯ ಅಧಿಕಾರಿಗಳ ಬಳಿಗೆ ಹೋದ ಆ ವಿದ್ಯಾರ್ಥಿನಿಯ ತಂದೆ, ಶಾಲೆ ಮುಚ್ಚದಂತೆ ಮನವಿ ಮಾಡಿದರು. ಆದರೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಅವರ ಮಾತು ಕೇಳಲು ಸಿದ್ಧರಿರಲಿಲ್ಲ.
ಅಧಿಕಾರಿಗಳಿಗೆ ಈ ರೀತಿ ಮೃಧುವಾಗಿ ಹೇಳಿದರೆ ಮಾತಿಗೆ ಬಗ್ಗಲ್ಲ ಅಂದುಕೊಂಡು ಕೀರ್ತನಾಳ ತಂದೆ, ನನ್ನ ಮಗಳ ಓದನ್ನು ನಿಲ್ಲಿಸುವುದಾಗಿಯೂ ಮತ್ತು ಹಾಗೆ ಮಾಡಿದಾಗ ಅದರಿಂದಾಗುವ ಪರಿಣಾಮವನ್ನು ಅಧಿಕಾರಿಗಳೇ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದರಿಂದ ಹೆದರಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಾಲೆ ಮುಚ್ಚುವ ವಿಷಯದಿಂದ ಇದೀಗ ಹಿಂದೆ ಸರಿದಿದ್ದಾರೆ.
ಶಾಲೆಯಲ್ಲಿ ದಾಖಲಾತಿ ಹೆಚ್ಚಿಸಲು ಅಧಿಕಾರಿಗಳು ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಅಭಿಯಾನ ನಡೆಸುತ್ತಿದ್ದಾರೆ. ಹಲವಾರು ವಿದ್ಯಾರ್ಥಿಗಳ ಪಾಲಕರು ತಮ್ಮ ಗ್ರಾಮದಲ್ಲಿ ಬೇರೆ ಶಿಕ್ಷಕರನ್ನು ನಿಯೋಜಿಸಿದರೆ ತಮ್ಮ ಮಕ್ಕಳನ್ನು ಕಳುಹಿಸುವುದಾಗಿ ಹೇಳಿದ ನಂತರ, ಹಿಂದಿ ಪಂಡಿತರೊಬ್ಬರನ್ನು ಶಾಲೆಗೆ ನಿಯೋಜಿಸಲಾಯಿತು.
ಇನ್ನು ಆ ಶಾಲೆಯಿಂದ ವಿದ್ಯಾರ್ಥಿಗಳು ಹೊರಗುಳಿಯಲು ಮಂಗಗಳ ಕಾಟವೇ ಕಾರಣ ಎಂಬುದನ್ನು ಅರಿತುಕೊಂಡ ಅಧಿಕಾರಿಗಳು, ಮಂಗಗಳನ್ನು ತಡೆಗಟ್ಟಲು ಶಾಲಾ ಆವರಣದಲ್ಲಿ ಸೌರ ಬೇಲಿ ಅಳವಡಿಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. ಡಿಜಿಟಲ್ ಬೋಧನೆಯನ್ನು ಜಾರಿಗೆ ತರಲಾಗುವುದು ಮತ್ತು ಶಾಲೆಯಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. (ಏಜೆನ್ಸೀಸ್)
RCB ವಿರುದ್ಧ ಮುಗ್ಗರಿಸಿದ ಹಾಲಿ ಚಾಂಪಿಯನ್ಸ್: ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ KKR ನಾಯಕ ರಹಾನೆ! KKR vs RCB
ವಿಶ್ವ ಜಲ ದಿನ ಅಂಗವಾಗಿ ವಾಕಥಾನ್: ನೀರು ಉಳಿಸಲು ಆದ್ಯತೆ ನೀಡುವಂತೆ ಶಿವಾ ಸಂಕೇಶ್ವರ ಕರೆ | World Water Day
ಕೇವಲ 95 ಪೈಸೆಗಾಗಿ ಕ್ಯಾಬ್ ಚಾಲಕ ಮತ್ತು ಮಹಿಳೆಯ ನಡುವೆ ಜಗಳ! ಅಷ್ಟಕ್ಕೂ ನಡೆದಿದ್ದೇನು? Cab Driver