ವಿಪ್ರ ಸಮುದಾಯದವರ ಒಗ್ಗಟ್ಟು ಸಮಾಜಕ್ಕೆ ಮಾದರಿ

sid
Published on

ವಿಜಯವಾಣಿ ಸುದ್ದಿಜಾಲ ಬೆಳ್ವೆ

ದ್ರಾವಿಡ ಬ್ರಾಹ್ಮಣ ಪರಿಷತ್ ಬೆಳ್ವೆ ವಲಯದ ವಿಪ್ರ ಸಮುದಾಯದವರ ಒಗ್ಗಟ್ಟು, ಮನಸ್ಸಿನ ಇಚ್ಛೆ, ದುಡಿಮೆ, ಶ್ರಮದಿಂದ ಕ್ಷಿಪ್ರ ಅವಧಿಯಲ್ಲಿ ವಿಪ್ರ ಸಭಾಭವನಕ್ಕೆ ಅವಶ್ಯವಾಗಿರುವ ಭೋಜನ ಶಾಲೆ ನಿರ್ಮಾಣಗೊಂಡಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಶೃಂಗೇರಿ ಮಠದ ಪ್ರಾಂತೀಯ ಧರ್ಮಾಧಿಕಾರಿ ಲಕ್ಷ್ಮೀಶ ಅಡಿಗ ಬಡಾಕೆರೆ ಹೇಳಿದರು.

ಬೆಳ್ವೆ ಶ್ರೀಶಂಕರನಾರಾಯಣ ದೇವಳದ ಬಳಿಯ ಬೆಳ್ವೆ ಶ್ರೀಶ ವಿಪ್ರ ಸಭಾಭವನದಲ್ಲಿ ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಬೆಳ್ವೆ ವಲಯದ ವತಿಯಿಂದ ನಿರ್ಮಾಣಗೊಂಡ ಭೋಜನ ಶಾಲೆ ಉದ್ಘಾಟಿಸಿ ಮಾತನಾಡಿದರು. ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಬೆಳ್ವೆ ವಲಯಾಧ್ಯಕ್ಷ ಎಂ.ಸತ್ಯನಾರಾಯಣ ಹೆಬ್ಬಾರ್ ಮರೂರು ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ಪಂಚಮಿ ಚಾರಿಟೆಬಲ್ ಟ್ರಸ್ಟ್ ಗಾಂಧಿ ಆಸ್ಪತ್ರೆ ವತಿಯಿಂದ ನೀಡಲಾದ ಕಲಿಕಾ ಪ್ರೋತ್ಸಾಹ ಧನವನ್ನು ಎಸ್ಸೆಸ್ಸೆಲ್ಸಿ ಸಾಧಕ ಪಿ.ಎಂ.ಸ್ಕಂದ ಹೆಬ್ಬಾರ್ ಆರ್ಡಿಗೆ ನೀಡಲಾಯಿತು. ವಿಪ್ರ ಮಕ್ಕಳಿಗೆ ನೋಟ್ಸ್ ಪುಸ್ತಕವನ್ನು ಉಚಿತವಾಗಿ ವಿತರಿಸಲಾಯಿತು. ಸಾಹಿತಿ ನಾಗರತ್ನಾ ಜಿ.ಹೆಬ್ಬಾರ್ ಅಬ್ಲಿಕಟ್ಟೆ ಅವರ ಕಾದಂಬರಿ‘ದೇವೀರಿ’ ಬಿಡುಗಡೆಗೊಳಿಸಲಾಯಿತು. ಮಹಿಳಾ ವಿಪ್ರ ಬಳಗದಿಂದ ವಿಷ್ಣು ಸಹಸ್ರನಾಮ, ಮರೂರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ರಂಗಪೂಜೆ ಮಹೋತ್ಸವ, ಬೆಳ್ವೆ ಶ್ರೀ ಶಂಕರನಾರಾಯಣ ದೇವರಿಗೆ ಶತರುದ್ರಾಭಿಷೇಕ, ಸಾಂಸ್ಕೃತಿಕ ಕಾರ್ಯಕ್ರಮ, ವಾರ್ಷಿಕ ಅಧಿವೇಶನ ನಡೆಯಿತು.

ಕುಂದಾಪುರ ದ್ರಾವಿಡ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಕೃಷ್ಣಾನಂದ ಚಾತ್ರ, ಕಾರ್ಯದರ್ಶಿ ವಾದಿರಾಜ ಹೆಬ್ಬಾರ್, ಮಹಿಳಾಧ್ಯಕ್ಷೆ ಭಾರ್ಗವಿ ಪಿ.ಭಟ್ ಗೋಳಿಯಂಗಡಿ, ಬೆಳ್ವೆ ವಲಯದ ಗೌರವಾಧ್ಯಕ್ಷ ರಾಧಾಕೃಷ್ಣ ಮಯ್ಯ ಹೊನ್ಕಲ್ಲು, ಮಹಿಳಾಧ್ಯಕ್ಷೆ ಕಲ್ಪನಾ ಎನ್.ಅಡಿಗ, ಶಂಕರನಾರಾಯಣ ಐತಾಳ್ ಇನ್ನಿತರರು ಉಪಸ್ಥಿತರಿದ್ದರು.

ಶ್ರೀನಿವಾಸ ಬಾಯರಿ ಬೆಪ್ಡೆ ಸ್ವಾಗತಿಸಿದರು. ಪೂರ್ಣಿಮಾ ರಾಜೇಂದ್ರ ಐತಾಳ್ ಪ್ರಾರ್ಥಿಸಿದರು. ನಿರಂಜನ ಬಾಯರಿ ವೇದ ಘೋಷ ಮಾಡಿದರು. ಕಾರ್ಯದರ್ಶಿ ಕೃಷ್ಣಮೂರ್ತಿ ಭಟ್ ಬೆಳ್ವೆ ವಾರ್ಷಿಕ ವರದಿ ವಾಚಿಸಿದರು. ಎಂ.ಚಂದ್ರಶೇಖರ ಮಂಜ ಮಡಾಮಕ್ಕಿ ಆಯವ್ಯಯ ಮಂಡಿಸಿದರು. ವೀಣಾಶ್ರೀ ಎಸ್.ಭಟ್, ಸುಬ್ರಹ್ಮಣ್ಯ ಭಟ್, ವೈ.ಕೆ.ಪ್ರಸನ್ನ ಭಟ್, ವಾಸುದೇವ ನಕ್ಷತ್ರಿ ಸಹಕರಿಸಿದರು. ಗಣೇಶ ಹೇರಳೆ ಹಳೆ ಸೋಮೇಶ್ವರ, ರಾಮಗಣೇಶ ಮಯ್ಯ ಹೊನ್ಕಲ್ಲು ಕಾರ್ಯಕ್ರಮ ನಿರೂಪಿಸಿದರು. ಶ್ರೀನಿವಾಸ ಬಾಯರಿ ಮರೂರು ವಂದಿಸಿದರು.

ಸನ್ಮಾನ

ಅರ್ಚಕ, ಕೃಷಿಕ ಶ್ರೀಧರ ಬಾಯರಿ ಮರೂರು, ಹೋಟೆಲ್ ಉದ್ಯಮಿ ನಾಗರಾಜ ಭಟ್ ಗೋಳಿಯಂಗಡಿ, ಅಭಿಯಂತರ ಅನಂತಪದ್ಮನಾಭ ವಾಕುಡ ಕೋಟಂಬೈಲು, ಶಸ್ತ್ರ ಚಿಕಿತ್ಸಾ ತಜ್ಞೆ ಡಾ.ರಂಜಿತಾ ಮಯ್ಯ ಹೊನ್ಕಲ್ಲು, ಲೆಕ್ಕ ಪರಿಶೋಧಕ ವರುಣ್ ಬಾಯರಿ, ಅರ್ಪಿತಾ ಮಯ್ಯ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net