ನೈಸರ್ಗಿಕ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ

bmr
Published on

ಬ್ರಹ್ಮಾವರ: ಆಷಾಢ ಮಾಸದಲ್ಲಿ ನೈಸರ್ಗಿಕವಾಗಿ ಸಿಗುವ ಸೊಪ್ಪು, ಗಡ್ಡೆ ಗೆಣಸು ಇನ್ನಿತರ ಆರೋಗ್ಯದಾಯಕ ಆಹಾರ ಬಳಸಿ ಆರೋಗ್ಯವಂತರಾಗಿದ್ದರು. ಆದರೆ ಇಂದು ರಾಸಾಯನಿಕಗಳಿಂದ ತಯಾರಾಗುವ ಬಣ್ಣದ ತಿನಿಸಿನಿಂದ ಆರೋಗ್ಯ ಹಾಳಾಗುತ್ತಿದ್ದು, ಗ್ರಾಮೀಣ ತಿನಿಸು ಸವಿಯುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಧರ್ಮದರ್ಶಿ ರಂಗನಕೇರಿ ಶ್ರೀನಿವಾಸ ಶೆಟ್ಟಿಗಾರ ಹೇಳಿದರು.

ಭಾನುವಾರ ಶ್ರೀ ಬ್ರಹ್ಮಲಿಂಗ ವೀರಭದ್ರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮಹಿಳಾ ವೇದಿಕೆ, ಯುವ ವೇದಿಕೆ ಆಶ್ರಯದಲ್ಲಿ ಜರುಗಿದ ಆಷಾಢ ಸಂಭ್ರಮ ಉದ್ಘಾಟಿಸಿ ಮಾತನಾಡಿದರು.

ನಾನಾ ಸಮಿತಿಯ ಪುರುಷೋತ್ತಮ ಶೆಟ್ಟಿಗಾರ್, ಚಂದ್ರಾವತಿ ಸದಾಶಿವ ಶೆಟ್ಟಿಗಾರ, ಸಂಜೀವ ಶೆಟ್ಟಿಗಾರ ಸಾಸ್ತಾನ, ಭಾಸ್ಕರ್ ಶೆಟ್ಟಿಗಾರ ಸಂತೆಕಟ್ಟೆ, ಯಡಾಡಿ ಮಹಾಬಲ ಶೆಟ್ಟಿಗಾರ, ಪದ್ಮನಾಭ ಶೆಟ್ಟಿಗಾರ ಕಾರ್ಕಡ, ಸುಧಾಕರ ವಕ್ವಾಡಿ, ಸಹ ಮೊಕ್ತೇಸರರು, ಗುರಿಕಾರರು, ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಜನಪದ ಸೊಗಡಿನ ವಸ್ತು ಪ್ರದರ್ಶನ

ವಿವಿಧ ಜನಪದ ಕ್ರೀಡೆ, ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪುರುಷರಿಗೆ ತೆಂಗಿನ ಕಾಯಿಯ ಸಿಪ್ಪೆ ಸುಲಿಯುವ, ಮಹಿಳೆಯರಿಗೆ ತೆಂಗಿನಕಾಯಿ ತುರಿಯುವ ಸ್ಪರ್ಧೆ ಸೇರಿದಂತೆ ಗ್ರಾಮೀಣ ಆಟ ಜರುಗಿತು. ವಿವಿಧ ಭಾಗದಿಂದ ಪಾಲ್ಗೊಂಡಿದ್ದ ಮಹಿಳೆಯರು 61 ಬಗೆಯ ಭಕ್ಷೃ ತಯಾರಿಸಿ ಸಾಮೂಹಿಕ ಸಹ ಭೋಜನ ಜರುಗಿತು. ಹಳ್ಳಿಯ ಜನಪದ ಸೊಗಡಿನ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net