ಎಣ್ಣೆಯುಕ್ತ ಚರ್ಮಕ್ಕೆ ಕಾಂತಿಯ ರಹಸ್ಯ!| Beauty tips

beauty tips
Published on

Beauty tips: ಇಂದಿನ ದಿನಗಳಲ್ಲಿ ಯಥೇಚ್ಛವಾಗಿ ಎಲ್ಲರೂ ಸುಂದರವಾದ ಮುಖವನ್ನು ಹೊಂದಲು ಇಷ್ಟಪಡುತ್ತಾರೆ. ಹಾಗಾಗಿ ಅದಕ್ಕಂತಲೇ, ಮುಖಕ್ಕೆ ಹಲವಾರು ರೀತಿಯ ಔಷಧಗಳನ್ನು ಮುಖಕ್ಕೆ ಹಚ್ಚುತ್ತಾರೆ. ಅನೇಕ ರೀತಿಯ ಕ್ರೀಮ್​ಗಳ ಮೊರೆ ಹೋಗುತ್ತಿದ್ದಾರೆ. ಅಂದಹಾಗೆ ನಿಮ್ಮ ಮುಖ ಹೊಳೆಯುವಂತೆ ಮಾಡಲು ಈ ರೀತಿಯ ಮನೆಯಲ್ಲೇ ತಯಾರಿಸಿದ ಫೇಸ್ಮಾಸ್ಕ್​ ಬಳಸಿ. ಇವು ನಿಮ್ಮ ಸೌಂದರ್ಯವನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತದೆ.

1. ತೆಂಗಿನ ಎಣ್ಣೆ ಮತ್ತು ಜೇನುತುಪ್ಪದ ಕ್ಲೆನ್ಸರ್

ಮೊದಲು ನಿಮ್ಮ ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಿ ನಂತರ, 1 ಚಮಚ ತೆಂಗಿನ ಎಣ್ಣೆಗೆ 1 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು 5 ನಿಮಿಷಗಳ ಕಾಲ ಮಸಾಜ್​ ಮಾಡಿ ನಂತರ ತೊಳೆಯಿರಿ. ಇದು ನಿಮ್ಮ ಚರ್ಮವನ್ನು ತೇವಗೊಳಿಸಿ, ಅದರಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ.

2. ಮೊಸರಿನ ಶುದ್ಧೀಕರಣ ಮಾಸ್ಕ್

​2 ಚಮಚ ತಾಜಾ ಮೊಸರಿಗೆ 1 ಚಿಟಿಕೆ ಅರಿಶಿನ ಸೇರಿಸಿ ಪೇಸ್ಟ್​ ತಯಾರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ನಮತರ ಮಸಾಜ್ ಮಾಡಿ 10 ನಿಮಿಷಗಳನ್ನು ಬಿಟ್ಟು ತೊಳೆಯಿರಿ. ಇದು ನಿಮ್ಮ ಚರ್ಮದಲ್ಲಿರುವ ಕಲ್ಮಶವನ್ನು ಕಡಿಮೆ ಮಾಡಿ. ನಿಮ್ಮ ಮುಖ ಅಂದವಾಗಿ ಕಾಣುವಂತೆ ಮಾಡುತ್ತದೆ.

3. ಓಟ್ಸ್ ಮತ್ತು ಹಾಲಿನ ಸ್ಕ್ರಬ್ಸ್​

1 ಚಮಚ ಪುಡಿ ಮಾಡಿದ ಓಟ್ಸ್ 2 ಚಮಚ ಹಾಲನ್ನು ಸೇರಿಸಿ ಮಿಶ್ರಣ ಮಾಡಿ. 2 ನಿಮಿಷಗಳು ಮಸಾಜ್​ ಮಾಡಿ 5 ನಿಮಿಷ ಬಿಟ್ಟು ಬೆಚ್ಚಗಿನ ನಿರಿನೊಂದಿಗೆ ತೊಳೆಯಿರಿ. ಇದು ನಿಮ್ಮ ಚರ್ಮವನ್ನು ಸೌಮ್ಯವಾಗಿ ಇರುವಂತೆ ಮಾಡುತ್ತದೆ. ಮೃದುವಾಗಿ ಕಾಣುವಂತೆ ಮಾಡುತ್ತದೆ.

4. ಅಲೋವೆರಾ ಜೆಲ್ ಕ್ಲೆನ್ಸರ್​

2 ಚಮಚ ಅಲೋವೆರಾ ಜೆಲ್, 1 ಚಮಚ ರೋಸ್​ ವಾಟರ್​ ಮಿಕ್ಸ್​ ಮಾಡಿ ಮುಖಕ್ಕೆ ಹಚ್ಚಿಕೊಮಡು 2 ನಿಮಿಷ ಮಸಾಜ್​ ಮಾಡಿ ನಂತರ 2 ನಿಮಿಷಗಳ ಕಅಲ ಬಿಟ್ಟು ಮುಖ ತೊಳೆಯಿರಿ ಇದು ನಿಮ್ಮ ಚರ್ಮವನ್ನು ಶಾಂತಗೊಳಿಸುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net