ರಾಜ್ಯದಲ್ಲಿ ಕರೊನಾಗೆ ಮತ್ತೊಬ್ಬ ಪೊಲೀಸ್​ ಬಲಿ

coronaaa
Published on

ಬೆಂಗಳೂರು: ಮಹಾಮಾರಿ ಕರೊನಾ ಸೋಂಕಿಗೆ ರಾಜ್ಯದಲ್ಲಿ ಮತ್ತೊಬ್ಬ ಪೊಲೀಸ್ ಬಲಿಯಾಗಿದ್ದು, ಇದು ಪೊಲೀಸ್​ ಸಾವಿನ ಎರಡನೇ ಪ್ರಕರಣ.

ಇತ್ತೀಚಿಗಷ್ಟೇ ಮೃತಪಟ್ಟಿದ್ದ ವಿವಿ ಪುರಂನ ಎಎಸ್​ಐ ಅವರಿಗೂ ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಇಂದು(ಶನಿವಾರ) ಕಲಾಸಿಪಾಳ್ಯ ಪೊಲೀಸ್ ಠಾಣೆಯ ಮುಖ್ಯಪೇದೆಯೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಇದೇ ಠಾಣೆಯ ಒಟ್ಟು 9 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ಇದನ್ನೂ ಓದಿರಿ ಮದುವೆ ಮನೆಯ ಅಡುಗೆ ಭಟ್ಟನಿಗೂ ಕರೊನಾ ಸೋಂಕು!

ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 56 ವರ್ಷದ ಮುಖ್ಯಪೇದೆಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಕರೊನಾ ರಣಕೇಕೆಗೆ ಬೆಂಗಳೂರು ಪೊಲೀಸರಲ್ಲಿ ಆತಂಕ ಮನೆಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net