ಕರ್ನಾಟಕದಲ್ಲಿ ಕರೊನಾಗೆ ಮೊದಲ ಪೊಲೀಸ್ ಬಲಿ!

coronaaa
Published on

ಬೆಂಗಳೂರು: ಪೊಲೀಸರನ್ನೂ ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕರೊನಾಗೆ ಎಎಸ್​ಐ ಬಲಿಯಾಗಿದ್ದು, ಇದು ರಾಜ್ಯದಲ್ಲಿ ಕೋವಿಡ್​19ಗೆ ಪೊಲೀಸ್​ ಸಾವಿನ ಮೊದಲ ಪ್ರಕರಣ.

ವಿ.ವಿ.ಪುರಂ ಸಂಚಾರಿ ಠಾಣೆಯ ಎಎಸ್ಐ ಮೃತರು. ಇವರು 15 ದಿನಗಳಲ್ಲಿ ನಿವೃತ್ತಿಯಾಗಲಿದ್ದರು. ಥಣಿಸಂದ್ರದ ಮನೆಯಲ್ಲಿ ಕುಸಿದು ಬಿದ್ದ ಎಎಸ್​ಐ ಸೋಮವಾರ ಮೃತಪಟ್ಟಿದ್ದರು. ಮರಣೋತ್ತರ ತಪಾಸಣೆ ಸಂದರ್ಭದಲ್ಲಿ ಇವರಿಗೆ ಕರೊನಾ ಪಾಸಿಟಿವ್ ಇದ್ದದ್ದು ಪತ್ತೆಯಾಗಿದೆ.

ವಿವಿ ಪುರಂ ಠಾಣೆಯ ಮತ್ತೊಬ್ಬ ಎಎಸ್ಐಗೂ ಸೋಂಕು ಇರುವ ಶಂಕೆ ವ್ಯಕ್ತವಾಗಿದೆ. ಸದ್ಯ ಠಾಣೆಯನ್ನು ಸೀಲ್​ಡೌನ್​ ಮಾಡಲಾಗುತ್ತಿದೆ. ಒಟ್ಟಾರೆ ಬೆಂಗಳೂರಿನಲ್ಲಿ ಕರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಇಂದಿಗೆ 36ಕ್ಕೆ ಏರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net