ಗಣೇಶ್‌ಗಾಗಿ ಮುಂದುವರಿದ ಶೋಧ

bridge
ಶೋಧ ಕಾರ್ಯಾಚರಣೆಯ ವೇಳೆ ಸೇತುವೆ ಮೇಲೆ ಜಮಾಯಿಸಿರುವ ಕುತೂಹಲಿಗರು
Published on

ಗುರುಪುರ: ಗುರುಪುರ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿರುವ ಸರಿಪಳ್ಳ ಕನ್ನಗುಡ್ಡೆ ನೂಜಿ ನಿವಾಸಿ, ಹವ್ಯಾಸಿ ಫೋಟೋಗ್ರಾಫರ್ ಗಣೇಶ್ ನೂಜಿಗಾಗಿ ಬುಧವಾರ ಬೆಳಗ್ಗಿನಿಂದ ನದಿಯಲ್ಲಿ ಹುಡುಕಾಟ ಆರಂಭವಾಗಿದೆ.

ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ, ಮುಳುಗುತಜ್ಞರು ದೋಣಿಯಲ್ಲಿ ಗಣೇಶ್ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಸೇತುವೆ ಮೇಲೆ ನೂರಾರು ಕುತೂಹಲಿಗರು ಜಮಾಯಿಸಿದ್ದು, ಆಗಾಗ್ಗೆ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಸಂಜೆ ವೇಳೆಗೆ ಮರವೂರು ಡ್ಯಾಂ ಬಳಿ ಹುಡುಕಾಟ ಮುಂದುವರಿದಿದ್ದು, ಗಣೇಶ್ ಪತ್ತೆಯಾಗಿಲ್ಲ. ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಿ, ಗುರುವಾರ ಕಾರ್ಯಾಚರಣೆ ನಡೆಸಲು ತೀರ್ಮಾನಿಸಿದೆ. ಕೆಲವು ದಿನಗಳಿಂದ ಗಣೇಶ್ ಮಾನಸಿಕ ಖಿನ್ನತೆಗೊಳಗಾಗಿದ್ದ ಎಂದು ಹೇಳಲಾಗಿದ್ದು, ಪತ್ನಿ ಅಶ್ವಿತಾ ಅವರು ಪತಿ ನಾಪತ್ತೆಯಾಗಿರುವ ಬಗ್ಗೆ ಸೋಮವಾರ ಬೆಳಗ್ಗೆ ಕಂಕನಾಡಿ ಠಾಣೆಯಲ್ಲಿ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net