ಗಾಳಿ-ಮಳೆಗೆ ಹಾರಿ ಹೋದ ಕ್ಯಾಂಟೀನ್ ಮೇಲ್ಛಾವಣಿ

blm-23.may.03.kaup male hani..
Published on

ಪಡುಬಿದ್ರೆ: ಭಾರಿ ಗಾಳಿ-ಮಳೆಗೆ ಪಡುಗ್ರಾಮದ ಬೀಚ್ ಬಳಿ ಇರುವ ದಯೋದರ ಪುತ್ರನ್ ಎಂಬುವರ ಕ್ಯಾಂಟೀನ್‌ನ ತಗಡು ಶೀಟು ಹಾರಿ ಹೋಗಿ ಅಪಾರ ಪ್ರವಾಣದ ನಷ್ಟ ಉಂಟಾಗಿದೆ.

ಗಾಳಿಗೆ ತಗಡು ಶೀಟ್ ಹಾರಿ ಹೋಗಿ ಪಕ್ಕದ ಹೊಳೆಗೆ ಬಿದ್ದಿದೆ. ಸಿಮೆಂಟ್ ಶೀಟ್‌ಗಳು ಮುರಿದು ಬಿದ್ದ ಪರಿಣಾಮ ಕ್ಯಾಂಟೀನ್‌ನಲ್ಲಿದ್ದ ಚಯರ್, ಟೇಬಲ್ ಸಹಿತ ಅಡುಗೆ ಸಲಕರಣೆಗಳಿಗೆ ಅಪಾರ ಹಾನಿಯುಂಟಾಗಿದೆ.

ಕಾಪು ಪುರಸಭಾ ಸದಸ್ಯ ನಿತಿನ್ ಕುವಾರ್, ಗ್ರಾಮ ಆಡಳಿತಾಧಿಕಾರಿ ವೆಂಕಟೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪಾಯದಿಂದ ಪಾರು

ಕ್ಯಾಂಟೀನ್ ವಾಲೀಕ ದಯೋದರ ಪುತ್ರನ್ ಅವರ ಸಹೋದರಿ ಮೀನಾಕ್ಷಿ ಕ್ಯಾಂಟಿನ್ ಒಳಗೆ ಕೆಲಸ ಮಾಡುತ್ತಿದ್ದರು. ಅಲ್ಲದೇ ಜೋರು ಗಾಳಿಗೆ ರಕ್ಷಣೆಗೆ ಕ್ಯಾಂಟೀನ್ ಬಳಿ ಬಂದಿದ್ದ ಗೃಹರಕ್ಷಕದಳ ಸಿಬ್ಬಂದಿ ಸುಬ್ರಹ್ಮಣ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

 ಮನೋರಂಜನಾ ಕ್ರಿಕೆಟ್ ಕ್ಲಬ್‌ಗೆ ಹಾನಿ

ಕಾಪು ಬೀಚ್‌ನಲ್ಲಿ ಪ್ರವಾಸಿಗರ ಅನುಕೂಲಕ್ಕಾಗಿ ಜೋಡಿಸಲಾಗಿದ್ದ ಮನೋರಂಜನಾ ಕ್ರಿಕೆಟ್ ಕ್ಲಬ್‌ನ ಕಂಬಗಳು ಉರುಳಿ ಬಿದ್ದು ಸುತ್ತಲೂ ಹಾಕಿರುವ ಬಲೆ ಮತ್ತು ವಿದ್ಯುತ್ ತಂತಿಗಳಿಗೂ ಅಪಾರ ಪ್ರವಾಣದಲ್ಲಿ ಹಾನಿಯುಂಟಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net