

ವಿಜಯವಾಣಿ ಸುದ್ದಿಜಾಲ ಬೆಳ್ವೆ
ನಮ್ಮ ಭಾಷೆ, ಸಂಸ್ಕೃತಿ, ಧಾರ್ಮಿಕತೆ, ಸಂಸ್ಕಾರ, ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಯುವ ಜನತೆಯ ಪಾತ್ರ ಮಹತ್ವದ್ದಾಗಿದೆ. ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ಹ್ವಾಯ್ ಕೆಸರಂಗ್ ಒಂದಿನ ಆಡ್ವ ಉತ್ತಮ ಕಾರ್ಯಕ್ರಮ ಎಲ್ಲರಿಗೂ ಸ್ಫೂರ್ತಿ ನೀಡಲಿ ಎಂದು ಶಂಕರನಾರಾಯಣ ಪೊಲೀಸ್ ಠಾಣೆ ಉಪನಿರೀಕ್ಷಕ ಯುನೇಸ್ ಗಡ್ಡೇಕರ್ ಹೇಳಿದರು.
ಬೆಳ್ವೆ ಶ್ರೀಶಂಕರನಾರಾಯಣ ದೇವಳ ಬಳಿಯ ಗದ್ದೆಯಲ್ಲಿ ಬೆಳ್ವೆ ಗೆಳೆಯರ ಬಳಗದ ವತಿಯಿಂದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಪ್ರಯುಕ್ತ ಹ್ವಾಯ್ ಕೆಸರಂಗ್ ಒಂದಿನ ಆಡ್ವ ಕಾರ್ಯಕ್ರಮ ಭಾನುವಾರ ಉದ್ಘಾಟಿಸಿ ವಾತನಾಡಿದರು.
ಬೆಳ್ವೆ ಗೆಳೆಯರ ಬಳಗದ ಅಧ್ಯಕ್ಷ ರತ್ನಾಕರ ಅಧ್ಯಕ್ಷತೆ ವಹಿಸಿದ್ದರು. ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ನಡೆದ ವಿವಿಧ ಕ್ರೀಡೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು.
ಬೆಳ್ವೆ ಶ್ರೀಶಂಕರನಾರಾಯಣ ದೇವಳ ಮೊಕ್ತೇಸರ ಶಂಕರ ಶೆಟ್ಟಿ, ಬೆಳ್ವೆ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಎಚ್.ವಸಂತಕುವಾರ್ ಶೆಟ್ಟಿ, ಕಾರ್ಕಳ ತಾಲೂಕು ಪಂಚಾಯಿತಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಹಾಬಲ ನಾಯ್ಕ ಅಲ್ಬಾಡಿ, ಅರಣ್ಯ ಇಲಾಖೆ ಅಲ್ಬಾಡಿ ಟಕದ ಉಪ ವಲಯಾರಣ್ಯಾಧಿಕಾರಿ ಹೇವಾ, ಪ್ರಮುಖರಾದ ಮಹಾದೇವ, ಬಿ.ಉದಯಕುವಾರ್ ಪೂಜಾರಿ, ದಿನೇಶ್ ಶೆಟ್ಟಿ, ಮನೋಜ್ ಶೆಟ್ಟಿ, ಬಿ.ಕಿಶನ್ರಾಜ್ ಶೆಟ್ಟಿ, ಮಹಾಬಲ ನಾಯ್ಕ, ಕೆ.ಸಂಜೀವ ಆರ್ಡಿ, ಅನ್ಸಾರ್ ಬೆಳ್ವೆ, ಆಶಾ ಬೆಳ್ವೆ ಮತ್ತಿತರರು ಉಪಸ್ಥಿತರಿದ್ದರು.
ಸವಾರೋಪ ಸವಾರಂಭದಲ್ಲಿ ಬೆಳ್ವೆ ಗೆಳೆಯರ ಬಳಗದ ಉಪಾಧ್ಯಕ್ಷ ಶಶಿಧರ, ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂದ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಸುರ್ಗೋಳಿ, ಪ್ರಮುಖರಾದ ಕೃಷಿಕ ಕೃಷ್ಣ ನಾಯ್ಕ, ನಾಗರಾಜ ಚಡಗ, ಶ್ಯಾಮ್ ಆಚಾರ್ಯ, ಶಿಕ್ಷಕ ರತ್ನಾಕರ ನಾಯ್ಕ, ಉದ್ಯಮಿ ಚಂದ್ರ ನಾಯ್ಕ, ಕೃಷ್ಣ ಪೂಜಾರಿ, ವಿನೋದಾ ಶೆಟ್ಟಿ, ಚಂದ್ರಿಕಾ ಬೆಳ್ವೆ, ಬೆಳ್ವೆ ಗೆಳೆಯರ ಬಳಗದವರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಜಯಂತ್ ಬೆಳ್ವೆ ಸ್ವಾಗತಿಸಿದರು. ಮಧುಕರ ಶೆಟ್ಟಿ ಬೆಳ್ವೆ ವಂದಿಸಿದರು. ಗಣೇಶ್ ಅರಸಮ್ಮಕಾನು, ಗಣೇಶ್ ಅಲ್ಬಾಡಿ ನಿರೂಪಿಸಿದರು.