ಒಳ್ಳೆಯ ಜ್ಞಾನಕ್ಕಾಗಿ ದೇವರಲ್ಲಿ ಪ್ರಾರ್ಥಿಸಿ

pdb (2)
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ವೇದದ ಆಜ್ಞೆಯಂತೆ ಬ್ರಾಹ್ಮಣ ಸವಾಜ ಸಂಧ್ಯಾವಂದನೆ, ನಿತ್ಯಾನುಷ್ಠಾನವನ್ನು ಮರೆಯಬಾರದು. ನಾವು ಕಲಿಯಬೇಕಾದದ್ದು ತುಂಬಾ ಇದ್ದು, ದೇವರಲ್ಲಿ ಒಳ್ಳೆಯ ಜ್ಞಾನ ಕೊಡುವಂತೆ ಪ್ರಾರ್ಥಿಸಬೇಕು ಎಂದು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ರಾಜಗೋಪಾಲ ಉಪಾಧ್ಯಾಯ ಕಿವಿವಾತು ಹೇಳಿದರು.

ಪಡುಬಿದ್ರಿ ಮಧ್ವ ನಗರ ತರಂಗಿಣಿ ಮಿತ್ರಮಂಡಳಿ ವತಿಯಿಂದ ಮಧ್ವನಗರದಲ್ಲಿ ಭಾನುವಾರ ಆಯೋಜಿಸಿದ್ದ ವಿದ್ಯಾನಿಧಿ, ಪ್ರತಿಭಾ ಪುರಸ್ಕಾರ, ಅರೋಗ್ಯನಿಧಿ ವಿತರಣೆ ಕಾರ್ಯಕ್ರಮದಲ್ಲಿ ವಾತನಾಡಿದರು.

ನಿವೃತ್ತ ಪ್ರಾಧ್ಯಾಪಕ ಸರ್ವಜ್ಞ ಆಚಾರ್, ಧಾರ್ಮಿಕ ಮುಖಂಡ ತೋಕೂರು ಸುಬ್ರಹ್ಮಣ್ಯ ಭಟ್ ವಾತನಾಡಿದರು.

ಸಾಧಕರಾದ ಎಂ.ಸಮೀರ ಆಚಾರ್ಯ ಉಡುಪಿ ಹಾಗೂ ವಿನಯಕುವಾರ್ ರಾವ್ ಅವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾನಿಧಿ, ಅನಾರೋಗ್ಯ ಪೀಡಿತರಿಗೆ ಅರೋಗ್ಯ ನಿಧಿ ವಿತರಿಸಲಾಯಿತು.

ತರಂಗಿಣಿ ಮಿತ್ರ ಮಂಡಳಿ ಗೌರವಾಧ್ಯಕ್ಷ ಪಿ.ಸದಾಶಿವ ಆಚಾರ್, ಕೋಶಾಧಿಕಾರಿ ಗೋವಿಂದ ರಾವ್, ಶ್ರೀನಿವಾಸ್ ರಾವ್, ಸುರೇಶ್ ರಾವ್ ಆಚಾರ್, ಸುದರ್ಶನ್ ಆಚಾರ್ ಉಪಸ್ಥಿತರಿದ್ದರು.

ಪೂರ್ವಾಧ್ಯಕ್ಷ ಚಂದ್ರಶೇಖರ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತರಂಗಿಣಿ ಮಿತ್ರ ಮಂಡಳಿ ಅಧ್ಯಕ್ಷ ಪಿ.ರವಾಕಾಂತ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ ರಾವ್ ವೈ.ಎಸ್. ವಂದಿಸಿದರು, ಶ್ರೀಧರ್ ಆಚಾರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net