ಜಗತ್ತಿಗೆ ಒಳಿತು ಮಾಡುವುದೇ ಧರ್ಮಗಳ ಉದ್ದೇಶ

sanmana
sanmana
Published on

ಹೆಬ್ರಿ: ನಮ್ಮ ವಿವಿಧ ಧರ್ಮಗಳ ಆಚರಣೆಗಳು ಬೇರೆಯಾದರೂ ಉದ್ದೇಶ ಮಾತ್ರ ಜಗತ್ತಿಗೆ ಒಳಿತು ವಾಡುವುದಾಗಿದೆ. ಜಾತಿ, ಮತ, ಧರ್ಮವನ್ನು ನಾವು ಪ್ರೀತಿಸಿದಾಗ ವಾತ್ರವೇ ಅದು ಉಳಿದು ಬೆಳೆಯುತ್ತದೆ. ಕರಾವಳಿ ಜಿಲ್ಲೆ ತುಳುನಾಡಿನಲ್ಲಿ ನಾಗರಾಧನೆ ಮತ್ತು ದೈವರಾಧನೆ ಮೂಲಕ ಒಗ್ಗಟ್ಟು ಇದೆ, ಅದು ಸದೃಢ ಕುಟುಂಬ ವ್ಯವಸ್ಥೆಗೆ ಕಾರಣವಾಗಿದೆ. ಆ ಮೂಲಕ ಸಂಟಿತ ಸವಾಜ ನಿರ್ಮಾಣವಾಗಿದೆ ಎಂದು ಗೌರಿಗದ್ದೆಯ ವಿನಯ್ ಗುರೂಜಿ ಹೇಳಿದರು.

ಹೆಬ್ರಿಯ ಶ್ರೀ ಕ್ಷೇತ್ರ ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ಮತ್ತು ನಂದಿಕೇಶ್ವರ ದೇವಸ್ಥಾನದಲ್ಲಿ ಮಂಗಳವಾರ ನಡೆದ ಧರ್ಮಯೋಗಿ ಮೋಹನ ಸ್ವಾಮೀಜಿಯವರ 4ನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ಧರ್ಮಯೋಗಿ ಸವ್ಮಾನ ಸ್ವೀಕರಿಸಿ ಮಾತನಾಡಿದರು.

ಮುದ್ರಾಡಿ ಮಂಜುನಾಥ ಪೂಜಾರಿ ವಾತನಾಡಿ, ಸರ್ವಧರ್ಮದವರೂ ಬಂದು ಸೇವೆ ಸಲ್ಲಿಸುವ ವೈಶಿಷ್ಯ ಕ್ಷೇತ್ರ ಮುದ್ರಾಡಿ ಎಂದರು. ಧಾರ್ಮಿಕ ಮುಖಂಡ ಬಜಗೋಳಿ ರವೀಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಧರ್ಮಯೋಗಿ ಮೋಹನ ಸ್ವಾಮೀಜಿ ಆರಾಧನಾ ಮಹೋತ್ಸವ ಪ್ರಯುಕ್ತ ಚಿಕ್ಕಮಗಳೂರಿನ ಕೆ.ಎಸ್.ನಿತ್ಯಾನಂದ ಸ್ವಾಮೀಜಿ ವಾರ್ಗದರ್ಶನದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ಭಜನಾ ಕಾರ್ಯಕ್ರಮ, ಪಟ್ಲ ಸತೀಶ ಶೆಟ್ಟಿ ಬಳಗದವರಿಂದ ಯಕ್ಷಗಾನ ತಾಳಮದ್ದಳೆ ‘ಅಂಗದ ಸಂಧಾನ’ ನಡೆಯಿತು. ಕಲಾವಿದರಾದ ಉಜಿರೆ ಅಶೋಕ ಭಟ್ ಮತ್ತು ಗಣೇಶ ಶೆಟ್ಟಿ ಕನ್ನಡಿಕಟ್ಟೆ ಭಾಗವಹಿಸಿದರು.

ವಿನಯ್ ಗುರೂಜಿ ತಮಗೆ ನೀಡಿದ ಧರ್ಮಯೋಗಿ ಸನ್ಮಾನವನ್ನು ಶ್ರೀ ಕ್ಷೇತ್ರ ಮುದ್ರಾಡಿಯನ್ನು ಬೆಳಗಿಸಲು ಮೋಹನ ಸ್ವಾಮೀಜಿ ಜತೆ ಶ್ರಮಿಸಿದ ಕಮಲ ಎಂ.ಪಿ. ಅವರಿಗೆ ಮರು ಪ್ರದಾನಿಸಿದರು. ಧಾರ್ಮಿಕ ಮುಖಂಡ ಪ್ರವೀಣ್ ಭಟ್, ಶ್ರೀ ಕ್ಷೇತ್ರ ಮುದ್ರಾಡಿಯ ಸುಕುವಾರ ಮೋಹನ್, ಪ್ರಮುಖರಾದ ಸುಧೀಂದ್ರ ಮೋಹನ್, ಸುರೇಂದ್ರ ಮೋಹನ್, ಉಮೇಶ್ ಕಲ್ಮಾಡಿ, ಕಮಲ ಎಂ.ಪಿ. ಉಪಸ್ಥಿತರಿದ್ದರು. ರಂಗ ನಿರ್ದೇಶಕ ಜಗದೀಶ ಜಾಲ ಪ್ರಾಸ್ತಾವಿಕವಾಗಿ ವಾತನಾಡಿ. ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net