ಹೆಚ್ಚು ಗಿಡ ಬೆಳೆಸಿದಾಗ ಆರೋಗ್ಯ ವೃದ್ಧಿ

sasyavana
ಚಿತ್ರಪಾಡಿ ಪಿಎಂಶ್ರೀ ಶಾಲೆಯ ಔಷಧೀಯ ಸಸ್ಯವನ ದಲ್ಲಿ ನಿತ್ಯಾನಂದ ಶ್ಯಾನುಭಾಗ್ ಗಿಟ ನೆಟ್ಟರು.
Published on

ಕೋಟ: ಸಣ್ಣ ವಯಸ್ಸಿನಿಂದಲೇ ಗಿಡ ನೆಡುವುದನ್ನು ರೂಢಿಸಿಕೊಂಡರೆ ಹಸಿರು ಕ್ರಾಂತಿ ಮಾಡಲು ಸಾಧ್ಯ. ಗಿಡಮರಗಳನ್ನು ಹೆಚ್ಚು ಬೆಳೆಸಿದಷ್ಟು ಮನುಷ್ಯನ ಆರೋಗ್ಯ ಮಟ್ಟ ವೃದ್ಧಿಸುತ್ತದೆ ಎಂದು ಉದ್ಯಮಿ ನಿತ್ಯಾನಂದ ಶ್ಯಾನುಭಾಗ್ ಅಭಿಪ್ರಾಯಪಟ್ಟರು.

ಚಿತ್ರಪಾಡಿಯ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪಾರಂಪಳ್ಳಿ ಪಾಂಚಜನ್ಯ ಸಂಘದ ಸಹಯೋಗದಲ್ಲಿ ಔಷಧೀಯ ಸಸ್ಯವನ ಉದ್ಘಾಟಿಸಿ ಮಾತನಾಡಿದರು.

ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ.ಮನೋಹರ ಪೂಜಾರಿ ವಿದ್ಯಾರ್ಥಿಗಳಿಗೆ ಗಿಡ ಹಸ್ತಾಂತರಿಸಿ ಪರಿಸರ ಜಾಗೃತಿ ಸಂದೇಶ ನೀಡಿದರು. ಪಾಂಚಜನ್ಯ ಸಂಘ ಅಧ್ಯಕ್ಷ ಕೃಷ್ಣಮೂರ್ತಿ ಮರಕಾಲ, ಎಸ್‌ಡಿಎಂಸಿ ಅಧ್ಯಕ್ಷ ಶಂಕರ ದೇವಾಡಿಗ, ಅಕ್ಷರ ರಥ ಸಮಿತಿ ಅಧ್ಯಕ್ಷ ನಾಗರಾಜ ಗಾಣಿಗ ,ಇಕೋ ಕ್ಲಬ್ ನೋಡಲ್ ಅಧಿಕಾರಿಗಳಾದ ಗಾಯತ್ರಿ, ಸವಿತಾ, ಕೃಷ್ಣ ಆಚಾರ್, ಅನಿತಾ, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಶಾಲಿನಿ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net