More

    9 ಲಕ್ಷ ರೂ. ಬಿಲ್ ಕಟ್ಟಿದರಷ್ಟೇ ಮೃತದೇಹ ಕೊಡೋದು… ಶವಕ್ಕಾಗಿ 30 ತಾಸು ಆಸ್ಪತ್ರೆ ಬಾಗಿಲು ಕಾದ ಕುಟುಂಬಸ್ಥರು!

    ಬೆಂಗಳೂರು: ಮಹಿಳೆಯೊಬ್ಬರು ಹೃದಯಾಘಾತದಿಂದ ಮೃತಪಟ್ಟು 30 ತಾಸು ಕಳೆದರೂ ಕುಟುಂಬಸ್ಥರಿಗೆ ಶವ ಕೊಡದೆ ಹಣಕ್ಕಾಗಿ ಖಾಸಗಿ ಆಸ್ಪತ್ರೆ ಸಿಬ್ಬಂದಿ ಸತಾಯಿಸಿದ್ದಾರೆ.

    ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 46 ವರ್ಷದ ಮಹಿಳೆ ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಹಾರ್ಟ್ ಅಟ್ಯಾಕ್ ಆಗಿ ನಿನ್ನೆ(ಗುರುವಾರ) ಬೆಳಗ್ಗೆ ಸಾವನ್ನಪ್ಪಿದ್ದಾರೆ. ಮೃತದೇಹ ತೆಗೆದುಕೊಂಡು ಹೋಗಲು ಬಂದ ಕುಟುಂಬಸ್ಥರಿಗೆ ಬರೋಬ್ಬರಿ 9 ಲಕ್ಷ ರೂ. ಬಿಲ್ ಕಟ್ಟುವಂತೆ ಸೂಚಿಸಿದ ಆಸ್ಪತ್ರೆ, ಒಂದು ದಿನವಾದ್ರೂ ಶವ ಕೊಡದೆ ಸತಾಯಿಸಿದೆ.

    ಇದನ್ನೂ ಓದಿರಿ ‘ಅಪ್ಪ.. ಯಾವ ಕಾಲೇಜಿಗೆ ಸೇರಿಸುತ್ತಿದ್ದೆ?’ ಎಂದ ಮಗ ಬಾರದ ಲೋಕಕ್ಕೆ ಸೇರಿಯೇಬಿಟ್ಟ!

    ಏನಿದು ಘಟನೆ?: ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 46 ವರ್ಷದ ಅಪ್ರೋಜ್​.ಬಿ ಎಂಬುವರು ಚಿಕಿತ್ಸೆಗಾಗಿ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ಹೇಳಿದ್ದರು. ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ಅಪ್ರೋಜ್​ರ ಪತಿಗೆ ಕಾರಿನಲ್ಲೇ ಹೃದಯಾಘಾತವಾಗಿ ಸಾವನ್ನಪ್ಪಿದ್ದರು. ತಂದೆಯ ಅಂತ್ಯಕ್ರಿಯೆಯನ್ನು ಮಗನೇ ಮುಂದೆ ನಿಂತು ನೆರವೇರಿಸಿದ್ದ. ಇದಾದ ಎರಡೇ ದಿನಕ್ಕೆ ಆ ಮಗನೂ ಹೃದಯಾಘಾತಕ್ಕೆ ಬಲಿಯಾದ.

    9 ಲಕ್ಷ ರೂ. ಬಿಲ್ ಕಟ್ಟಿದರಷ್ಟೇ ಮೃತದೇಹ ಕೊಡೋದು... ಶವಕ್ಕಾಗಿ 30 ತಾಸು ಆಸ್ಪತ್ರೆ ಬಾಗಿಲು ಕಾದ ಕುಟುಂಬಸ್ಥರು!ಇತ್ತ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಕೂಡ ನಿನ್ನೆ(ಗುರುವಾರ) ಬೆಳಗ್ಗೆ ಸುಮಾರು 8.45ಕ್ಕೆ ಆಸ್ಪತ್ರೆಯಲ್ಲೇ ಅಸುನೀಗಿದರು. ಮೃತದೇಹ ಪಡೆಯಲು ಬಂದ ಕುಟುಂಬಸ್ಥರಿಗೆ ಶಾಕ್​ ಕಾದಿತ್ತು.

    ‘ಜುಲೈ 12ರಿಂದಲೂ ಚಿಕಿತ್ಸೆ ನೀಡಿದ್ದೇವೆ. ಬರೋಬ್ಬರಿ 9 ಲಕ್ಷ ರೂ. ಬಿಲ್ ಪಾವತಿಸಿ ಮೃತದೇಹ ತೆಗೆದುಕೊಂಡು ಹೋಗಿ’ ಎಂದು ಆಸ್ಪತ್ರೆಯವರು ಸೂಚಿಸಿದ್ದಾರೆ. ಒಂದಲ್ಲ..ಎರಡಲ್ಲ.. ಬರೋಬ್ಬರಿ 9 ಲಕ್ಷ ಹಣ ಎಲ್ಲಿಂದ ತರೋದು? ಎಂದು ದಿಕ್ಕುತೋಚದ ಕುಟುಂಬಸ್ಥರು ಆಸ್ಪತ್ರೆ ಬಾಗಿಲಲ್ಲೇ ಸತತ 30 ತಾಸು ಕಾದಿದ್ದಾರೆ.

    ‘ನಮ್ಮ ಬಳಿ ಹಣ ಇಲ್ಲ, ಮೃತದೇಹ ಕೊಡಿ’ ಎಂದು ಮೃತರ ಕುಟುಂಬಸ್ಥರು ಅಂಗಲಾಚಿದ್ದಾರೆ. ಬಿಬಿಎಂಪಿಯವರು ಹೇಳಿದ್ರೆ ಮೃತದೇಹ ನೀಡೋದಾಗಿ ಸಿಬ್ಬಂದಿ ಹೇಳಿದ್ದಾರೆ. ಇತ್ತ ಕುಟುಂಬಸ್ಥರು ಬಿಬಿಎಂಪಿಗೆ ಕರೆ ಮಾಡಿದ್ರೆ, ‘ನಾವು ಮಾತನಾಡಿದ್ದೇವೆ ಮೃತದೇಹ ನೀಡ್ತಾರೆ.

    ನೀವು ಮೃತದೇಹ ಪಡೆದುಕೊಳ್ಳಿ’ ಎಂಬ ಉತ್ತರ ಬಂದಿದೆ. ಆದರೆ, ಇಂದು ಮಧ್ಯಾಹ್ನವಾದರೂ ಮೃತದೇಹ ಕುಟುಂಬಸ್ಥರ ಕೈ ಸೇರಿರಲಿಲ್ಲ. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಮೃತದೇಹ ನೀಡಲು ಆಸ್ಪತ್ರೆ ಒಪ್ಪಿಕೊಂಡಿದೆ.

    ತೋಟದ ಮನೆಯಲ್ಲಿ ಸೆಕ್ಸ್ ಮಾಡುತ್ತಿರುವಾಗಲೇ ಮಹಿಳೆ ಮತ್ತು ಯುವಕನನ್ನು ಬರ್ಬರವಾಗಿ ಕೊಚ್ಚಿ ಹಾಕಿದ ಅಜ್ಜ-ಮೊಮ್ಮಗ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts