ಈ ಸಣ್ಣ ಬಟ್ಟಲಿನ ಬೆಲೆ ಬರೋಬ್ಬರಿ 248 ಕೋಟಿ ರೂಪಾಯಿ! ಇದರ ವಿಶೇಷತೆ ಕೇಳಿದ್ರೆ ಬೆರಗಾಗ್ತೀರಾ

Small Bowl
Published on

ಈ ಮೇಲಿನ ಫೋಟೋದಲ್ಲಿ ನೀವು ನೋಡುತ್ತಿರುವ ಸಣ್ಣ ಬಟ್ಟಲಿನ ಬೆಲೆ ಎಷ್ಟು ಅಂತ ಗೊತ್ತಾದ್ರೆ ಖಂಡಿತ ಆಶ್ಚರ್ಯ ಪಡುತ್ತೀರಿ. ಇದೊಂದು ಪುರಾತನ ಕಾಲದ ಬೌಲ್​ ಆಗಿದೆ. ನಾವಿಲ್ಲಿ ಒಂದು ಗಾದೆಯನ್ನು ನೆನಪಿಸಿಕೊಳ್ಳಬೇಕು. ಅದೇನೆಂದರೆ, ಓಲ್ಡ್ ಈಸ್ ಗೋಲ್ಡ್. ಇದೇ ತತ್ವದ ಆಧಾರದ ಮೇಲೆ ತುಂಬಾ ಹಳೆಯದಾದ ಈ ಪುಟ್ಟ ಬಟ್ಟಲಿಗೆ ಬರೋಬ್ಬರಿ 248 ಕೋಟಿ ರೂಪಾಯಿಗಳ ಬೃಹತ್ ಮೊತ್ತ ಸಿಕ್ಕಿದೆ. ಅಷ್ಟಕ್ಕೂ ಈ ಬಟ್ಟಲಿನ ವಿಶೇಷತೆ ಏನು? ಈ ಹಳೆಯ ವಸ್ತು ಏಕೆ ಇಷ್ಟೊಂದು ದುಬಾರಿಯಾಗಿದೆ? ಎಂಬ ಪ್ರಶ್ನಿಗಳಿಗೆ ಉತ್ತರ ಇಲ್ಲಿದೆ.

ಈ ಅಪರೂಪದ 1000 ವರ್ಷಗಳಷ್ಟು ಹಳೆಯದಾದ ಸಣ್ಣ ಬಟ್ಟಲು ಹರಾಜಿನಲ್ಲಿ 248 ಕೋಟಿ ರೂ.ಗೆ ಮಾರಾಟವಾಗಿದೆ. ಹಾಂಗ್​ಕಾಂಗ್ ನಲ್ಲಿ ನಡೆದ ಹರಾಜಿನಲ್ಲಿ ಈ ಅಪರೂಪದ ಘಟನೆ ನಡೆದಿದೆ. ಈ ಚಿಕ್ಕ ಬಟ್ಟಲು ಚೀನಾದ ಸಾಂಗ್ ರಾಜವಂಶಕ್ಕೆ ಸೇರಿದೆ. ಅದಕ್ಕಾಗಿಯೇ ಇದಕ್ಕೆ ತುಂಬಾ ಬೇಡಿಕೆಯಿದೆ. ಈ ಬಟ್ಟಲಿನ ಹರಾಜಿನಲ್ಲಿ ಹಲವಾರು ಶ್ರೀಮಂತರು ಭಾಗವಹಿಸಿದ್ದರು. ಕೆಲವರು ಖುದ್ದಾಗಿ ಭಾಗವಹಿಸಿದರೆ, ಇನ್ನು ಕೆಲವರು ಆನ್‌ಲೈನ್ ಹರಾಜಿನಲ್ಲಿಯೂ ಭಾಗವಹಿಸಿದ್ದರು. ಈ ಬೌಲ್‌ಗೆ ಕೇವಲ 20 ನಿಮಿಷದಲ್ಲಿ 248 ಕೋಟಿ ರೂ. ಹರಿದುಬಂದಿದೆ.

ಇನ್ನು ಈ ಬೌಲ್ ವಿಚಾರಕ್ಕೆ ಬಂದರೆ, ಇದರ ಸುತ್ತಳತೆ 13 ಸೆಂ.ಮೀ. ತಿಳಿ ನೀಲಿ ಬಣ್ಣ ಹಸಿರು. ರಾಜರ ಕಾಲದಲ್ಲಿ ಬ್ರಷ್ ತೊಳೆಯಲು ಈ ಪಾತ್ರೆ ಬಳಸಲಾಗುತ್ತಿತ್ತು. ಹರಾಜಿನಲ್ಲಿ ಈ ಬಟ್ಟಲಿನ ಬೆಲೆ 67 ಕೋಟಿ ರೂ.ಗೆ ನಿಗದಿಯಾಗಿತ್ತು. ಬೌಲ್‌ನ ಬೆಲೆ ಕೇವಲ 20 ನಿಮಿಷಗಳಲ್ಲಿ 67 ಕೋಟಿಯಿಂದ 248 ಕೋಟಿಗೆ ಏರಿತು.

ಈ ಹಿಂದೆ 2014ರಲ್ಲಿ ಮಿಂಗ್ ರಾಜವಂಶಕ್ಕೆ ಸೇರಿದ ವೈನ್ ಪಾತ್ರೆ ಹರಾಜಾಗಿತ್ತು. ಲಿಯು ಎಂಬ ವ್ಯಕ್ತಿ 235 ಕೋಟಿ ರೂ. ಕೊಟ್ಟು ಖರೀದಿ ಮಾಡಿದ್ದ. ಇದೀಗ ಆ ದಾಖಲೆಯನ್ನು ಈ ಸಣ್ಣ ಬಟ್ಟಲು ಮುರಿದಿದೆ. ಆದರೆ, ಹರಾಜು ನಡೆಸಿದ ಕಂಪನಿ ಈ ಬಟ್ಟಲನ್ನು ಖರೀದಿಸಿದ ವ್ಯಕ್ತಿಯ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net