

ಬೆಂಗಳೂರು: ಅಂತರಂಗ ಬಹಿರಂಗ ತಂಡದ ವನಿತೆಯರ ವಿನೂತನ ನಗೆ ನಾಟಕಗಳ ಪ್ರದರ್ಶನ ಆ.18ಕ್ಕೆ ನಡೆಯಲಿದೆ.
ಎನ್.ಆರ್.ಕಾಲೋನಿಯಲ್ಲಿರುವ ಡಾ.ಸಿ.ಅಶ್ವಥ್ ಕಲಾ ಭವನದಲ್ಲಿ ಸಂಜೆ 4.30ರ ಮೊದಲ ಶೋನಲ್ಲಿ ಬಾಯ್ ತುಂಬ ನಕ್ಬಿಡಿ, 7.30ರ ಎರಡನೇ ಶೋನಲ್ಲಿ ಹಿಂಗ್ ಮಾಡಿದ್ರೆ ಹೆಂಗೆ ಹಾಸ್ಯಪ್ರಧಾನ ನಾಟಕಗಳ ಪ್ರದರ್ಶನ ನಡೆಯಲಿದೆ.
ನಾಗವೇಣಿ ರಂಗನ್ ರಚಿಸಿರುವ ನಾಟಕಗಳನ್ನು ವನಿತಾ ರಂಗಾಯಣ ಮತ್ತು ಬಾಷ್ ರಾಘವೇಂದ್ರ ನಿರ್ದೇಶನ ಮಾಡಿದ್ದಾರೆ. ಬುಕ್ ಮೈ ಶೋನಲ್ಲಿ ಟಿಕೆಟ್ ಲಭ್ಯವಿದ್ದು, ನೇರ ಬುಕ್ಕಿಂಗ್ಗಾಗಿ 86605 47776 ಸಂಖ್ಯೆಯನ್ನು ಸಂಪರ್ಕಿಸಬಹುದು.