More

    ದೀಪಾವಳಿಗೆ ಬೋನಸ್ ನೀಡದ ಮಾಲೀಕನ ಬರ್ಬರ ಹತ್ಯೆ..ಡಾಬಾ ಕಾರ್ಮಿಕರ ಕೃತ್ಯಕ್ಕೆ ಬೆಚ್ಚಿಬಿದ್ದ ನಾಗ್ಪುರ ಜನ

    ನಾಗ್ಪುರ: ಕೇಳಿದ ತಕ್ಷಣ ದೀಪಾವಳಿಗೆ ಬೋನಸ್ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಢಾಬಾ ಮಾಲೀಕರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ದುರ್ಘಟನೆ ನಡೆದಿದೆ.

    ಇದನ್ನೂ ಓದಿ: ಕಾಶ್ಮೀರ ದಾಲ್ ಸರೋವರದಲ್ಲಿ ಬೋಟ್ ಬೆಂಕಿ ಅವಘಡ: ಮೂವರು ವಿದೇಶಿಯರು ಸಾವು

    ದೀಪಾವಳಿಗೆ ಬೋನಸ್ ಹಣ ನೀಡಲಿಲ್ಲ ಎಂಬ ಕೋಪದಲ್ಲಿ ಢಾಬಾ ಕೆಲಸಗಾರರಿಬ್ಬರು ಮಾಲೀಕನನ್ನೇ ಬರ್ಬರವಾಗಿ ಕೊಂದಿರುವ ಘಟನೆ ಭಾರೀ ಮಹಾರಾಷ್ಟ್ರದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಮೃತರನ್ನು ಮಾಜಿ ಸರಪಂಚ್ ರಾಜು ಧೆಂಗ್ರೆ ಎಂದು ಗುರುತಿಸಸಲಾಗಿದೆ.
    ನಾಗ್ಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕುಹಿ ಫಟಾ ಬಳಿಯ ಧಾಬಾದಲ್ಲಿ ಶನಿವಾರ ಮುಂಜಾನೆ ಈ ಘಟನೆ ನಡೆದಿದೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

    ಇಬ್ಬರು ಆರೋಪಿಗಳನ್ನು ಮಧ್ಯಪ್ರದೇಶದ ಮಾಂಡ್ಲಾ ಮೂಲದ ಛೋಟು ಮತ್ತು ಆದಿ ಎಂದು ಗುರುತಿಸಲಾಗಿದೆ. ಒಂದು ತಿಂಗಳ ಹಿಂದೆ ರಾಜು ಧೆಂಗ್ರೆ ಮಧ್ಯಪ್ರದೇಶದ ಕಾರ್ಮಿಕ ಗುತ್ತಿಗೆದಾರರ ಮೂಲಕ ಇಬ್ಬರನ್ನೂ ತನ್ನ ಧಾಬಾದಲ್ಲಿ ಕೆಲಸಗಾರರನ್ನಾಗಿ ನೇಮಿಸಿಕೊಂಡಿದ್ದರು.

    ಈ ಇಬ್ಬರು ಇತ್ತೀಚೆಗೆ ಮಾಲೀಕರೊಂದಿಗೆ ಊಟ ಮಾಡುತ್ತಿದ್ದಾಗ ದೀಪಾವಳಿ ಬೋನಸ್ ಕೇಳಿದ್ದಾರೆ. ಆಗ ರಾಜು ಧೆಂಗ್ರೆ ಸದ್ಯಕ್ಕೆ ಬೋನಸ್​ ಕೊಡಲಾಗದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಬೇರೆ ದಿನ ಪಾವತಿಸಲು ಒಪ್ಪಿಕೊಂಡಿದ್ದಾರೆ. ಆದರೆ, ಕೇಳಿದ ತಕ್ಷಣ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮಾಲೀಕನ ಕೊಲೆಗೆ ಸಂಚು ರೂಪಿಸಿದ್ದ ಆರೋಪಿಗಳು, ಅಂದು ರಾತ್ರಿ ಊಟ ಮುಗಿಸಿ ಧೆಂಗ್ರೆ ಮಲಗಿದ್ದಾಗ ಕುತ್ತಿಗೆಗೆ ಹಗ್ಗ ಬಿಗಿದು ತಲೆಗೆ ಕಲ್ಲಿನಿಂದ ಹೊಡೆದು ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಮುಖ ವಿರೂಪಗೊಳಿಸಿ ಹತ್ಯೆ ಮಾಡಿದ್ದಾರೆ.

    ಬಳಿಕ ಧೆಂಗ್ರೆ ಅವರ ದೇಹವನ್ನು ಕಂಬಳಿಯಲ್ಲಿ ಸುತ್ತಿ ಅವರದೇ ಕಾರಿನಲ್ಲಿ ತೆಗೆದುಕೊಂಡು ಪರಾರಿಯಾಗಿದ್ದಾರೆ. ಆದರೆ ವಿಹಾರಗಾಂವ್ ಬಳಿ ನಾಗ್ಪುರ-ಉಮ್ರೆಡ್ ರಸ್ತೆಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಇಬ್ಬರೂ ಆರೋಪಿಗಳು ಗಾಯಗೊಂಡಿದ್ದಾರೆ.

    ಬಳಿಕ ಅವರು ಕಾರಿನಿಂದ ಇಳಿದು ದಿಘೋರಿ ಕಡೆಗೆ ಪರಾರಿಯಾಗಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿದೆ. ಮತ್ತೊಂದೆಡೆ, ಧೆಂಗ್ರೆ ಅವರ ಮಗಳು ತನ್ನ ತಂದೆಗೆ ಎಷ್ಟು ಬಾರಿ ಕರೆ ಮಾಡಿದರೂ ಫೋನ್ ತೆಗೆಯದ ಕಾರಣ ತನ್ನ ಪಕ್ಕದ ಗಿರವಿ ಅಂಗಡಿಯ ಮ್ಯಾನೇಜರ್‌ಗೆ ಫೋನ್ ಮಾಡಿದ್ದಾಳೆ. ಆದರೆ, ಈ ದುಷ್ಕೃತ್ಯಕ್ಕೆ ಹಣಕಾಸಿನ ವಿಚಾರವೇ ಕಾರಣ ಎನ್ನಿಸುತ್ತಿದೆ.. ಇಲ್ಲವಾದರೆ, ಮಾಜಿ ಸರಪಂಚ್ ಹಾಗೂ ಸ್ಥಳೀಯ ಆಡಳಿತದ ವ್ಯಕ್ತಿಯಾಗಿರುವುದರಿಂದ ರಾಜಕೀಯ ಪ್ರತಿಸ್ಪರ್ಧಿಗಳ ಷಡ್ಯಂತ್ರ ಯಾವುದಾದರೂ ಇದೆಯೇ? ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.

    ದೀಪಾವಳಿಗೆ ಅಫ್ಗನ್​ ಕ್ರಿಕೆಟಿಗ ನೆರವು: ರಹಮಾನುಲ್ಲಾ ಗುರ್ಬಾಜ್ ನಡೆಗೆ ನೆಟ್ಟಿಗರು ಮೆಚ್ಚುಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts