More

    ದೀಪಾವಳಿಗೆ ಅಫ್ಗನ್​ ಕ್ರಿಕೆಟಿಗ ನೆರವು: ರಹಮಾನುಲ್ಲಾ ಗುರ್ಬಾಜ್ ನಡೆಗೆ ನೆಟ್ಟಿಗರು ಮೆಚ್ಚುಗೆ…

    ಅಹಮದಾಬಾದ್‌: ಅಫ್ಘಾನಿಸ್ತಾನದ ಕ್ರಿಕೆಟಿಗ ರಹಮಾನುಲ್ಲಾ ಗುರ್ಬಾಜ್ ದೀಪಾವಳಿಯ ಮುನ್ನಾದಿನದಂದು ಇಲ್ಲಿನ ಬೀದಿ ಜನರಿಗೆ ಸಹಾಯ ಮಾಡಿದ್ದು, “ಅವರೂ ದೀಪಾವಳಿ ಆಚರಿಸಲಿ” ಎಂದೇಳಿರುವ ವಿಡಿಯೋ ವೈರಲ್​ ಆಗಿದೆ.

    ಇದನ್ನೂ ಓದಿ: ನಮ್ಮ ಯೋಧರು ಹಿಮಾಲಯದಂತೆ ದೃಢವಾಗಿ ನಿಂತಿರುವವರೆಗೂ ಭಾರತ ಸುರಕ್ಷಿತ: ಪ್ರಧಾನಿ ಮೋದಿ
    ಪ್ರಸ್ತುತ ನಡೆಯುತ್ತಿರುವ ಏಕದಿನ ವಿಶ್ವಕಪ್‌ಗಾಗಿ ಭಾರತದಲ್ಲಿರುವ ಅಫ್ಘಾನಿಸ್ತಾನದ ವಿಕೆಟ್‌ಕೀಪರ್ ಮತ್ತು ಬ್ಯಾಟ್ಸ್​ಮ್ಯಾನ್​ ಆಗಿರುವ ರಹಮಾನುಲ್ಲಾ ಗುರ್ಬಾಜ್ 2023 ರ ದೀಪಾವಳಿಯ ಸಂದರ್ಭದಲ್ಲಿ ಅಹಮದಾಬಾದ್‌ನ ನಿರಾಶ್ರಿತ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಅಫ್ಘಾನಿಸ್ತಾನ ಏಕದಿನ ವಿಶ್ವಕಪ್‌ನಲ್ಲಿ ತನ್ನ ಅದ್ಭುತ ಪ್ರದರ್ಶನದ ಮೂಲಕ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿತ್ತು. ತಂಡವು ಹಶ್ಮತುಲ್ಲಾ ಶಾಹಿದಿ ನೇತೃತ್ವದ ತಂಡವು ಮಾಜಿ ಚಾಂಪಿಯನ್ ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ಸೋಲಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿತ್ತು.

    ಮ್ಯಾಕ್ಸ್ ವೆಲ್ ಮಾರಕ ಪ್ರದರ್ಶನದಿಂದಾಗಿ ಗೆಲುವಿನ ಹೊಸ್ತಿಲಲ್ಲಿದ್ದ ಅಫ್ಘಾನಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸೋಲುಂಡಿತು. ಇದರ ಹೊರತಾಗಿಯೂ ಅವರ ಹೋರಾಟದ ಮನೋಭಾವ ಅಭಿಮಾನಿಗಳ ಮನಗೆದ್ದಿದ್ದು, ಹಿಂದುಗಳು ಆಚರಿಸುವ ದೀಪಾವಳಿ ಸಂದರ್ಭಕ್ಕೆ ರಹಮಾನುಲ್ಲಾ ಗುರ್ಬಾಜ್ ನಿರ್ಗತಿಕರಿಗೆ ಹಣ ನೀಡುತ್ತಿರುವ ವಿಡಿಯೋ ಸಾಮಾಜಿಕ ವಲಯದಲ್ಲಿ ವೈರಲ್ ಆಗುತ್ತಿದೆ.

    ಈ ವೀಡಿಯೋವನ್ನು ಕ್ರಿಕೆಟ್ ವೀಕ್ಷಕ ಮುಫದ್ದಲ್ ವೋರಾ ಶೇರ್ ಮಾಡಿದ್ದು, ವಿಡಿಯೋವನ್ನು ಒಂದೂವರೆ ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಇನ್ನು ಹಲವರು ಶೇರ್ ಮಾಡಿದ್ದಾರೆ. ಬೀದಿ ಬದಿ ಬಡವರಿಗೆ ಹೆಚ್ಚಿನ ಪ್ರಚಾರವಿಲ್ಲದೆ ಹಣ ಪಾವತಿಸಿರುವುದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಪ್ರಸ್ತುತ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ, ಭಾರತವು ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾವು ಆಸ್ಟ್ರೇಲಿಯಾವನ್ನು ಎದುರಿಸಲಿದೆ. ವಿಜೇತರು ನವೆಂಬರ್ 19 ರಂದು ಅಹಮದಾಬಾದ್‌ನ ಐಕಾನಿಕ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಅನ್ನು ಆಡಲಿದ್ದಾರೆ.

    ಮೋದಿಯನ್ನು ಉಲ್ಲೇಖಿಸಿ ಸೈನಿಕರಿಗೆ ದೀಪಾವಳಿ ಶುಭಾಶಯ ಕೋರಿದ ವಿಜಯೇಂದ್ರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts