More

  ಭೀಕರ ಅಪಘಾತ 21 ಜನ ಸಾವು, 38 ಗಂಭೀರ ಗಾಯ!

  ಕಾಬೂಲ್: ದಕ್ಷಿಣ ಅಫ್ಘಾನಿಸ್ತಾನದ ಹೆಲ್ಮಂಡ್​ನಲ್ಲಿ ಪೆಟ್ರೋಲ್​ ಟ್ಯಾಂಕರ್, ಬಸ್​ ಮತ್ತು ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಬಸ್​ನಲ್ಲಿದ್ದ 21 ಜನರು ಸಾವನ್ನಪ್ಪಿದ್ದಾರೆ. 38 ಮಂದಿ ಗಾಯಗೊಂಡಿರುವ ಭೀಕರ ಘಟನೆ ನಡೆದಿದೆ.

  ಇದನ್ನೂ ಓದಿ: ಎಂಎಲ್​ಎ ಟಿಕೆಟ್​ ಸಿಕ್ಕಿದ್ದಕ್ಕೆ ಅರ್ಧ ತಲೆಕೂದಲು ಮೀಸೆ ಬೋಳಿಸಿಕೊಂಡ ಎಂಎಲ್​ಎ ಅಭ್ಯರ್ಥಿ…! 

  ಬೈಕ್​​​ಗೆ ಡಿಕ್ಕಿಯಾದ ನಂತರ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಹಾರ್‌ನಿಂದ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದ್ದ ಪೆಟ್ರೋಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಹೆಲ್ಮಂಡ್‌ನ ಗ್ರಿಷ್ಕ್ ಜಿಲ್ಲೆಯ ರಾಜಧಾನಿ ಕಾಬೂಲ್ ಮತ್ತು ಉತ್ತರದ ಹೆರಾತ್ ನಗರದ ನಡುವಿನ ಮುಖ್ಯ ಹೆದ್ದಾರಿಯಲ್ಲಿ ಭಾನುವಾರ ಮುಂಜಾನೆ ಅಪಘಾತ ಸಂಭವಿಸಿದೆ.

  ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ ಎಂದು ಹೆಲ್ಮಂಡ್ ಗವರ್ನರ್ ವಕ್ತಾರ ಮೊಹಮ್ಮದ್ ಖಾಸಿಮ್ ರಿಯಾಜ್ ಎಎಫ್‌ಪಿಗೆ ತಿಳಿಸಿದ್ದಾರೆ.

  ಅಪಘಾತದಲ್ಲಿ ಗಾಯಗೊಂಡವರಲ್ಲಿ 11 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 27 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ಚಾಲಕನ ನಿಯಂತ್ರಣ ತಪ್ಪಿ ದಕ್ಷಿಣ ನಗರವಾದ ಕಂದಹಾರ್‌ನಿಂದ ಹೆರಾತ್‌ಗೆ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದ ತೈಲ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡಿದೆ. ಅಪಘಾತದಲ್ಲಿ ಟ್ಯಾಂಕರ್ ನಲ್ಲಿದ್ದ ಮೂವರು ಹಾಗೂ 16 ಬಸ್ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

  ಕಳಪೆ ರಸ್ತೆಗಳು, ಅಪಾಯಕಾರಿ ಚಾಲನೆ ಜೊತೆಗೆ ಸಂಚಾರ ದಟ್ಟನೆ ಕಾರಣಗಳಿಂದ ಅಫ್ಘಾನಿಸ್ತಾನದಲ್ಲಿ ಅಪಘಾತಗಳು ಸಾಮಾನ್ಯವಾಗಿದೆ ಎಂದು ವರದಿಯಾಗಿದೆ. ಇಂತಹದ್ದೇ ಘಟನೆ ಡಿಸೆಂಬರ್ 2022ರಲ್ಲಿ ಸಂಭವಿಸಿದ್ದು ಈ ಅಪಘಾತದಲ್ಲಿ 31 ಜನರು ಸಾವನ್ನಪ್ಪಿದ್ದರು. ಹಲವು ಮಂದಿ ಗಾಯಗೊಂಡಿದ್ದರು.

  ಎಂಎಲ್​ಎ ಟಿಕೆಟ್​ ಸಿಕ್ಕಿದ್ದಕ್ಕೆ ಅರ್ಧ ತಲೆಕೂದಲು ಮೀಸೆ ಬೋಳಿಸಿಕೊಂಡ ಎಂಎಲ್​ಎ ಅಭ್ಯರ್ಥಿ…!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts