ಒಳ್ಳೆಯ ಕೆಲಸದ ಸ್ಮರಣೆ ಶ್ಲಾಘನೀಯ

hebri
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಹೆಬ್ರಿ ಮತ್ತು ಕಾರ್ಕಳ ಕ್ಷೇತ್ರಕ್ಕೆ ಹಲವಾರು ಶಾಶ್ವತ ಕೊಡುಗೆ ನೀಡಿದ ಗೋಪಾಲ ಭಂಡಾರಿ ಅವರ ಹೆಸರು ಶಾಶ್ವತವಾಗಿ ಜನಮಾನಸದಲ್ಲಿ ಉಳಿಯಬೇಕು, ಒಳ್ಳೆಯ ಕೆಲಸ ಮಾಡಿದಾಗ ಕಾಲದ ನಂತರವೂ ಸ್ಮರಿಸುತ್ತಾರೆ ಎಂಬ ಸಂದೇಶ ಸಮಾಜಕ್ಕೆ ಹೋಗಬೇಕು ಎಂದು ಹೆಬ್ರಿ ಗೋಪಾಲ ಭಂಡಾರಿ ಅಭಿಮಾನಿಗಳ ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದರು.

ಗೋಪಾಲ ಭಂಡಾರಿ ಅಭಿಮಾನಿಗಳ ವೇದಿಕೆಯ ವತಿಯಿಂದ ಹೆಬ್ರಿ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ವಕೀಲ ಎಚ್.ಶೇಖರ ಮಡಿವಾಳ್, ಮುಖಂಡರಾದ ಮುನಿಯಾಲು ಗೋಪಿನಾಥ್ ಭಟ್, ಕಿರಣ್ ಹೆಗ್ಡೆ ಕಾರ್ಕಳ, ಮುನಿಯಾಲು ಆನಂದ ಪೂಜಾರಿ, ಅಣ್ಣಪ್ಪ ಕುಲಾಲ್ ಮಂಡಾಡಿಜಡ್ಡು, ಹೆಬ್ರಿ ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ ಶೆಟ್ಟಿ ಮಾತನಾಡಿದರು.

ಚಾರ ಗ್ರಾಮ ಪಂಚಾಯತಿ ಅಧ್ಯಕ್ಷ ದಿನೇಶ ಶೆಟ್ಟಿ, ಪ್ರಮುಖರಾದ ಸೀತಾನದಿ ರಮೇಶ ಹೆಗ್ಡೆ, ಹೆಬ್ರಿ ಶೀನ ಪೂಜಾರಿ, ಹೆಬ್ರಿ ವಾದಿರಾಜ ಶೆಟ್ಟಿ, ಕಾರ್ಕಳ ಸುಧಾಕರ ಕೋಟ್ಯಾನ್, ಜಾರ್ಜ್ ಕ್ಯಾಸ್ಟಲಿನೋ ನಕ್ರೆ, ಎಳ್ಳಾರೆ ರಾಘವ ದೇವಾಡಿಗ, ಕಾರ್ಕಳ ಭಾನು ಭಾಸ್ಕರ್, ಗೋಪಾಲ ಭಂಡಾರಿ ಅವರ ಸಹೋದರ ರಾಜೇಶ ಭಂಡಾರಿ, ಪುತ್ರ ಪ್ರದೀಪ್ ಭಂಡಾರಿ ಸಹಿತ ಹಲವಾರು ಮಂದಿ ಅಭಿಮಾನಿಗಳು ಭಾಗವಹಿಸಿದ್ದರು. ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಜನಾರ್ಧನ್ ಕಾರ್ಯಕ್ರಮ ನಿರೂಪಿಸಿದರು. ನವೀನ್ ಕೆ.ಅಡ್ಯಂತಾಯ  ಸ್ವಾಗತಿಸಿದರು.

ಪುತ್ಥಳಿ ಪ್ರತಿಷ್ಠಾಪನೆ, ಸಮಿತಿ ರಚನೆ

ಅಜಾತಶತ್ರು ಜನನಾಯಕ ಬಡವರ ಆಶಾಕಿರಣ ಕಾರ್ಕಳ ಕ್ಷೇತ್ರದ ಶಾಸಕರಾಗಿದ್ದ ಹೆಬ್ರಿ ಗೋಪಾಲ ಭಂಡಾರಿ ಅವರ ಶಿಲಾ ಪುತ್ಥಳಿ ಪ್ರತಿಷ್ಠಾಪನೆ, ಸಂಸ್ಮರಣ ಗ್ರಂಥ ಮತ್ತು ಅವರ ಹೆಸರಿನಲ್ಲಿ ಜನಸೇವೆ ಮಾಡಲು ಟ್ರಸ್ಟ್ ರಚನೆ ಮಾಡುವ ನಿರ್ಧಾರ ಕೈಗೊಳ್ಳಲಾಯಿತು. ಹೆಬ್ರಿ ಕಾರ್ಕಳ ರಾಜ್ಯ ಹೆದ್ದಾರಿಯ ತಾಣ ಅರ್ಧನಾರೀಶ್ವರ ದೇವಸ್ಥಾನದ ಎದುರಿನ ವೃತ್ತದಲ್ಲಿ ಶಿಲಾ ಪುತ್ಥಳಿ ಪ್ರತಿಷ್ಠಾಪನೆಗೆ ನಿರ್ಧರಿಸಲಾಯಿತು. ಸಂಸ್ಮರಣಾ ಗ್ರಂಥ ರಚನೆಗೆ ಸಮಿತಿ ರಚಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net