ದುಡಿದ ಒಂದಂಶ ಸಮಾಜಕ್ಕೆ ನೀಡಿದರೆ ಏಳಿಗೆ ಸಾಧ್ಯ

blm-2
Published on

ಕಾರ್ಕಳ: ಪ್ರಪಂಚದ ಲಕ್ಷಾಂತರ ಜೀವರಾಶಿಗಳಲ್ಲಿ ಮನುಷ್ಯನಿಗೆ ಭಗವಂತ ವಿಶೇಷ ಬುದ್ಧಿಶಕ್ತಿ ನೀಡಿದ್ದಾನೆ. ಮನುಷ್ಯ ದುಡಿದ ಒಂದಿಷ್ಟು ಅಂಶವನ್ನು ಸಮಾಜಕ್ಕೆ ನೀಡಿದಾಗ ಸಮಾಜದ ಏಳಿಗೆ ಸಾಧ್ಯ ಎಂದು ಸುಬ್ರಹ್ಮಣ್ಯ ಮಠದ ಶ್ರೀಸಂಪುಟ ನರಸಿಂಹ ಸ್ವಾಮಿ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಕಾರ್ಕಳದ ಬಿ.ಮಂಜುನಾಥ್ ಪೈ ಸಭಾಂಗಣದಲ್ಲಿ ಭಾನುವಾರ ನಡೆದ ತೆಳ್ಳಾರು ಮಹೇಶ್ ಶೆಟ್ಟಿ ಕುಡುಪುಲಾಜೆ ಅವರ 50ನೇ ಜನ್ಮದಿನಾಚರಣೆ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ತೆಳ್ಳಾರು ಮಹೇಶ್ ಶೆಟ್ಟಿ ಕುಡುಪುಲಾಜೆ ದಂಪತಿಯನ್ನು ಅಭಿಮಾನಿಗಳು ಸನ್ಮಾನಿಸಿದರು. ಕಾರ್ಕಳ ಶಾಸಕ ವಿ.ಸುನೀಲ್‌ಕುಮಾರ್ ಮಾತನಾಡಿದರು. ಉದ್ಯಮಿ ಬೋಳ ಪ್ರಭಾಕರ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಎಂ.ಆರ್.ಜಿ ಗ್ರೂಪ್ ಚೇರ್‌ಮ್ಯಾನ್ ಪ್ರಕಾಶ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಹಿರಿಯ ವಕೀಲ ಎಂ.ಕೆ. ವಿಜಯಕುಮಾರ್, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ ಭೋಜ ಶೆಟ್ಟಿ, ಮುಂಬೈ ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಜಿ.ಅಮೀನ್, ಮುಂಬೈ ಉದ್ಯಮಿ ಎನ್.ಟಿ. ಪೂಜಾರಿ, ಸಹೋದರ ತೆಳ್ಳಾರ್ ಗಿರೀಶ್ ಶೆಟ್ಟಿ ಕುಡುಪುಲಾಜೆ ಉಪಸ್ಥಿತರಿದ್ದರು. ಸುನೀಲ್ ಕೆ.ಆರ್. ಸ್ವಾಗತಿಸಿದರು. ಕರುಣಾಕರ್ ಕಾರ್ಯಕ್ರಮ ನಿರೂಪಿಸಿದರು. ನಿರಂಜನ್ ಜೈನ್ ವಂದಿಸಿದರು.

ಮನುಷ್ಯರು ಭಗವಂತ ಹಾಗೂ ಸಮಾಜದ ಪರ ಎನ್ನುವ ಎರಡು ವಿಧದಲ್ಲಿ ಬುದುಕಬೇಕಾಗಿದೆ. ನಮ್ಮಿಂದಾದ ಸೇವೆಯನ್ನು ಭಗವಂತ ಹಾಗೂ ಸಮಾಜಕ್ಕೆ ನೀಡಬೇಕು. ಮಹೇಶ್ ಶೆಟ್ಟಿ ಅವರು ತನಗಾಗಿ ಬದುಕದೆ ಇಡೀ ಹಿಂದೂ ಸಮಾಜಕ್ಕಾಗಿ ಏನಾದರೂ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಸೇವೆ ನೀಡುತ್ತಿದ್ದಾರೆ. ಅದರಂತೆ ನಾವೆಲ್ಲರೂ ಸಮಾಜದ ಋಣ ತೀರಿಸುವ ಮೂಲಕ ಬದುಕನ್ನು ಅರ್ಥಪೂರ್ಣವಾಗಿ ಕಳೆಯಬೇಕಾಗಿದೆ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠದ ಶ್ರೀಸಂಪುಟ ನರಸಿಂಹ ಸ್ವಾಮಿ ಮಠಾಧೀಶ. https://www.vijayavani.net/heavy-rain-and-wind-damage-across-karkala-taluk https://www.vijayavani.net/responsibility-for-protecting-government-projects

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net