

ಕೋಲಾರ: ರಾಷ್ಟ್ರಧ್ವಜ ಸುಟ್ಟು ದುರಹಂಕಾರ ಮೆರೆದ ಲಾರಿ ಡ್ರೈವರ್ಗೆ ಸ್ಥಳೀಯರೇ ತಕ್ಕ ಪಾಠ ಕಲಿಸಿದ ಘಟನೆ ಮಾಲೂರು ತಾಲೂಕಿನ ಮಾಸ್ತಿ ಗ್ರಾಮದಲ್ಲಿ ನಡೆದಿದೆ.
ಈತ ಉತ್ತರ ಭಾರತ ಮೂಲದ ಡ್ರೈವರ್. ದುರಹಂಕಾರದಿಂದ ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿದ್ದಾನೆ. ಅದನ್ನು ನೋಡಿದ ಸ್ಥಳೀಯರು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಆತನ ಒಂದು ಕೈಯಲ್ಲಿ ರಾಷ್ಟ್ರಧ್ವಜ, ಮತ್ತೊಂದು ಕೈಯಲ್ಲಿ ಕರ್ನಾಟಕ ಧ್ವಜ ಹಿಡಿಸಿ, ಮೆರವಣಿಗೆ ಮಾಡಿದ್ದಾರೆ.
ಸ್ಥಳಕ್ಕೆ ಮಾಸ್ತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.