ಆದಿವಾಸಿಗಳಿಗೆ ಅನ್ಯಾಯ ಎಸಗಿರುವುದು ಖಂಡನೀಯ

DR S SRIKANTH DEED
ಡಾ.ಎಸ್.ಶ್ರೀಕಾಂತ್
Published on

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಹೊರಹಾಕಲ್ಪಟ್ಟ 3418 ಆದಿವಾಸಿ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು ಹೈಕೋರ್ಟ್ ಆದೇಶಿಸಿ 15 ವರ್ಷಗಳೇ ಸಂದರೂ ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶ ಪಾಲಿಸದೆ ಆದಿವಾಸಿಗಳಿಗೆ ಅನ್ಯಾಯವೆಸಗಿರುವುದು ಖಂಡನೀಯವೆಂದು ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ಬೇಸರಿಸಿದರು.

ಆದಿವಾಸಿ ಕುಟುಂಬಗಳಿಗಾಗಿರುವ ಈ ಅನ್ಯಾಯವನ್ನು ಸರಿಪಡಿಸಬೇಕೆಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ನೂತನವಾಗಿ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಶಿವಕುಮಾರ್ ಅವರಿಗೆ ಪತ್ರ ಮುಖೇನ ಮಾಹಿತಿ ರವಾನಿಸಿ ನ್ಯಾಕ್ಕಾಗಿ ಆಗ್ರಹಿಸಲಾಗಿದೆ. ಅಲ್ಲದೆ ಸರ್ಕಾರದ ವಿರುದ್ಧ ನ್ಯಾಯಾಲಯ ನಿಂದನೆ ಪ್ರಕರಣ ದಾಖಲಿಸುವ ಮಟ್ಟಿಗೆ ಗಿರಿಜನರನ್ನು ದೂಡಬೇಡಿ ಎಂದು ಎಚ್ಚರಿಸಲಾಗಿದೆ. ಮನವಿ ಪತ್ರದಲ್ಲಿ ಹೈಕೋರ್ಟ್ ಆದೇಶದ ಪ್ರತಿ, ನಾಗರಹೊಳೆ ಕಾಡಿಂದ ಪುನರ್ವಸತಿ ನೀಡದೆ ಹೊರಹಾಕಿರುವವರ ಸ್ಥಿತಿ, ಡಿಸಿ ಕಚೇರಿ ಮುಖ್ಯಮಂತ್ರಿಗೆ ಈ ಹಿಂದೆ ಬರೆದಿರುವ ಪತ್ರಗಳನ್ನು ಲಗತ್ತಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net