ಆ.11ಕ್ಕೆ ವಿಶ್ವ ಹಿಂದು ಪರಿಷತ್ ನೂತನ ಭವನ 'ಧರ್ಮಶ್ರೀ' ಲೋಕಾರ್ಪಣೆ

vhp
Published on

ಬೆಂಗಳೂರು: ದೇಶ, ಧರ್ಮ, ಸಂಸ್ಕೃತಿ, ಸಂಸ್ಕಾರದ ಪ್ರಚಾರಕ್ಕಾಗಿ ಜಗತ್ತಿನಾದ್ಯಂತ ಇರುವ ಹಿಂದುಗಳನ್ನು ಸಂಘಟಿಸುವ ವಿಶ್ವ ಹಿಂದು ಪರಿಷದ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಲಯದ ನೂತನ ಭವನದ ಲೋಕಾರ್ಪಣೆಯು ಇದೇ ಆ.11ಕ್ಕೆ ನಡೆಯಲಿದೆ.

ಚಾಮರಾಜಪೇಟೆ ಶಂಕರಮಠದ ಸಮಾನಾಂತರ ರಸ್ತೆಯಲ್ಲಿರುವ ವಿಹಿಂಪ ಕಚೇರಿ ಸ್ಥಳದಲ್ಲಿ ನೂತನವಾಗಿ ನಿರ್ಮಿಸಿರುವ ಕಾರ್ಯಾಲಯದ ಕಟ್ಟಡಕ್ಕೆ ‘ಧರ್ಮಶ್ರೀ’ ಎಂದು ನಾಮಕರಣ ಮಾಡಲಾಗಿದ್ದು, ಆ.11ರಂದು ಬೆಳಗಿನ 4 ಗಂಟೆಯ ಬ್ರಾಹ್ಮಿ ಮುಹೂರ್ತದಲ್ಲಿ ಗೃಹಪ್ರವೇಶದ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ನಂತರ ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಆದಿಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆರ್ಟ್ ಆಫ್ ಲೀವಿಂಗ್‌ನ ಶ್ರೀ ಶ್ರೀ ರವಿಶಂಕರ ಗುರೂಜಿ ಸಾನ್ನಿಧ್ಯ ವಹಿಸಲಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಹಾಗೂ ವಿಹಿಂಪ ಅಂತಾರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net