ಕೋಟ: ಮಕ್ಕಳ ಪ್ರಾಥಮಿಕ ಹಂತ ಅತ್ಯಂತ ಮಹತ್ತರವಾಗಿದೆ. ಅದನ್ನು ಶಿಕ್ಷಣದ ಮೂಲಕ ಅರ್ಥಪೂರ್ಣವಾಗಿಸಿಕೊಳ್ಳಿ ಎಂದು ಧಾರ್ಮಿಕ ಚಿಂತಕ ಎನ್.ಆರ್ ದಾಮೋದರ ಶರ್ಮ ಹೇಳಿದರು.
ಕೋಟದ ಮಾಂಗಲ್ಯ ಮಂದಿರದಲ್ಲಿ ಲಿಟ್ಲ್ ಸ್ಕಾರ್ಲರ್ ಪ್ರೀ ಸ್ಕೂಲ್ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಸಾಧಕರು ಹಾಗೂ ಕ್ರೀಡಾಕೂಟದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಶಾಲಾ ಮುಖ್ಯಸ್ಥ ಶ್ರೀಕಾಂತ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ದಯಾನಂದ ಆಚಾರ್, ಅನುಸೂಯ ಹೇರ್ಳೆ, ಮನೋಹರ್ ಪೂಜಾರಿ, ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ವಿದ್ಯಾ ಶ್ರೀಕಾಂತ್ ಆಚಾರ್ ಪ್ರಸ್ತಾವನೆಗೈದರು. ಕಲಾವತಿ ಅಶೋಕ್ ಸ್ವಾಗತಿಸಿದರು. ಸಿಂಚನ ಕಾರ್ಯಕ್ರಮ ನಿರೂಪಿಸಿದರು.