

ವಿಜಯವಾಣಿ ಸುದ್ದಿಜಾಲ ಬೈಂದೂರು
ಮನುಷ್ಯರಲ್ಲಿ ಪರಿಪೂರ್ಣತೆ ತರುವುದೇ ಶಿಕ್ಷಣ. ನೈತಿಕ ಮೌಲ್ಯಗಳಿಲ್ಲದ ಆಧುನಿಕ ಶಿಕ್ಷಣ ವಿದ್ಯಾರ್ಥಿಗಳನ್ನು ಸ್ವಾರ್ಥಿಯಾಗಿಸುತ್ತಿದೆ. ಮನುಷ್ಯನಲ್ಲಿ ಗುರು ಹಿರಿಯರ ಅನಾದರ, ಧಾರ್ಮಿಕ ರಿವಾಜುಗಳ ಅವಹೇಳನ ಸದಾ ಸ್ವಹಿತ ಚಿಂತನೆಗೆ ಪ್ರಾಮುಖ್ಯತೆ ನೀಡುವಂತೆ ಮಾಡಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಯಳಜಿತ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಸಂಭ್ರಮದ ಸವಿನೆನಪಿನ ನೂತನ ರಂಗಮಂದಿರ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ನೆಲ್ಯಾಡಿ ದೀಪಕ್‌ಕುಮಾರ್ ಶೆಟ್ಟಿ ಅವರು ಕೊಡುಗೆಯಾಗಿ ಶಾಲಾ ವಾಹನವನ್ನು ಹಸ್ತಾಂತರಿಸಿದರು. ಶಾಸಕ ಗುರುರಾಜ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು. ರಮಣಶ್ರೀ ಪ್ರತಿಷ್ಠಾನ ಅಧ್ಯಕ್ಷ ನಾಡೋಜ ಎಸ್.ಷಡಕ್ಷರಿ ಸಮಾರಂಭ ಉದ್ಘಾಟಿಸಿದರು. ವಲಯ ಅರಣ್ಯಾಧಿಕಾರಿ ಸಂದೇಶ ಕುಮಾರ್ ಸ್ವಸ್ತಿವಾಚನಗೈದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ಕೆ. ನಾಯ್ಕ, ಉದ್ಯಮಿ ಚಂದನ್ ಬಿಲ್ಲವ, ಪ್ರಾಶಾಶಿ ಸಂಘ ಅಧ್ಯಕ್ಷ ಶೇಖರ ಪೂಜಾರಿ, ಗೋಳಿಹೊಳೆ ಗ್ರಾಪಂ ಮಾಜಿ ಅಧ್ಯಕ್ಷ ಮಂಜಯ್ಯ ಪೂಜಾರಿ, ಎಸ್‌ಡಿಎಂಸಿ ಅಧ್ಯಕ್ಷ ರವಿಚಂದ್ರ ಶೆಟ್ಟಿ, ಕಟ್ಟಡ ರಚನಾ ಸಮಿತಿ ಅಧ್ಯಕ್ಷ ರಮೇಶ ಪೂಜಾರಿ, ಶತಮಾನೋತ್ಸವ ಸಮಿತಿ ಖಜಾಂಚಿ ಕೆ.ಎಂ.ಕೊಠಾರಿ, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜೇಂದ್ರ ಶೆಟ್ಟಿ, ವಿದ್ಯಾರ್ಥಿ ನಾಯಕ ಓಂಗಣೇಶ್, ನಾಯಕಿ ಪ್ರಜ್ಞಾ ಇದ್ದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ವೈ.ಮಂಗೇಶ ಶ್ಯಾನುಭಾಗ್ ಸ್ವಾಗತಿಸಿದರು. ಶಿಕ್ಷಕ ಸದಾಶಿವ ಪ್ರಸ್ತಾವನೆಗೈದರು. ಮುಖ್ಯಶಿಕ್ಷಕಿ ಪದ್ಮಾವತಿ ವರದಿ ಮಂಡಿಸಿದರು. ಉದಯ ಹುಲ್ಕಡಿಕೆ ನಿರೂಪಿಸಿದರು.
ಮಹಾಪುರುಷರ, ಸಾಧಕರ ಬಾಲ್ಯವನ್ನು ಗಮನಿಸಿದಾಗ ಬಾಲ್ಯದ ಬದುಕು ಮಹಾಪುರುಷರ ಭವಿಷ್ಯಕ್ಕೆ ಭದ್ರಬುನಾದಿ ಹಾಕಿದ್ದು ಸಾಬೀತಾಗಿದೆ. ಮಕ್ಕಳ ವಯಸ್ಸಿಗೆ ಅನುಗುಣವಾದ ಹಾಗೂ ಮುಂದೆ ಉತ್ತಮ ಬದುಕು ಕಟ್ಟಿಕೊಳ್ಳಲು ಬೇಕಾದ ಅವಶ್ಯಕತೆಗಳಿಗೆ ಪೂರಕವಾದ ಶಿಕ್ಷಣ ದೊರೆಯಬೇಕು. ಸ್ವಾರ್ಥಕ್ಕಿಂತ ನನ್ನ ದೇಶ ದೊಡ್ಡದು ಎನ್ನುವಂತಹ ರಾಷ್ಟ್ರಭಕ್ತರ ನಿರ್ಮಾಣ ಕೇಂದ್ರಗಳು ಸ್ಥಾಪನೆಯಾಗಬೇಕು. -ಕೋಟ ಶ್ರೀನಿವಾಸ ಪೂಜಾರಿ ಸಂಸದ https://www.vijayavani.net/protest-by-hot-meal-employees-2 https://www.vijayavani.net/congestion-of-seized-vehicles-at-police-stations