ತಾಳಿ ಕಟ್ಟಬೇಕಿದ್ದ ವರ ಮದುವೆ ಮುಂಚೆಯೇ ಪರಾರಿ! ನಾಪತ್ತೆಯಾದವನಿಗಾಗಿ ಪೊಲೀಸರ ಶೋಧ?| Missing Person

Missing Person
Published on

ಹೈದರಾಬಾದ್​: ಕೆಲವೇ ದಿನಗಳಲ್ಲಿ ತಾಳಿ ಕಟ್ಟಬೇಕಿದ್ದ ವರ ಮದುವೆ ಮುಂಚೆನೇ ನಾಪತ್ತೆಯಾಗಿರುವ(Missing Person) ಘಟನೆ ಹೈದರಾಬಾದ್​ನಲ್ಲಿ ಇತ್ತೀಚಿಗೆ ನಡೆದಿದೆ.

ವರನ ಹಠಾತ್​ ಕಣ್ಮರೆಯು ಇಬ್ಬರ (ವಧು-ವರ) ಕುಟುಂಬಗಳನ್ನು ಚಿಂತೆಗೀಡು ಮಾಡಿದೆ. ಅಲ್ಲದೆ, ಈ ಪ್ರಕರಣದಿಂದ ವಧುನಿನ ಮುಂದಿನ ಭವಿಷ್ಯದ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ. ಇನ್ನು 40 ವರ್ಷದ ಸಂದೀಪ್​ ರಮೇಶ್​ ನಾಪತ್ತೆಯಾಗಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಈ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಪೊಲೀಸ್​ ಇಲಾಖೆ ಬಲೆ ಬೀಸಿದೆ ಎಂದು ವರದಿಯಾಗಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಸಂದೀಪ್​ ರಮೇಶ್​ ಮದುವೆಯನ್ನು ಅವರ ಸಹದ್ಯೋಗಿ ಮಡೇಪಲ್ಲಿಯ ನಿವಾಸಿ ಜತೆ ಇದೇ ಶುಕ್ರವಾರ (ನ.08) ನಿಗದಿಪಡಿಸಲಾಗಿತ್ತು. ಈ ಹಿನ್ನೆಲೆ ಎರಡು ಕುಟುಂಬಗಳು ಮದುವೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿತ್ತು. ಎಲ್ಲರೂ ಮದುವೆ ಸಿದ್ಧತೆ ಕಾರ್ಯದಲ್ಲಿ ಇರಬೇಕಾದಾಗ, ಸಂದೀಪ್​ ತಮ್ಮ ಅಣ್ಣ ಶ್ರೀಕಾಂತ್​ ಅವರ ಮೋಬೈಲ್​ಗೆ ಮೆಸೇಜ್ (ನನಗೆ ಈ ಮದುವೆ ಇಷ್ಟ ಇಲ್ಲ)​ ಮಾಡಿ ಹೊರಟು ಹೋಗಿದ್ದಾರೆ.​ ಮೊಬೈಲ್​ ಪೋನ್​ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಇದರಿಂದ ಕಳವಳಗೊಂಡ ಶ್ರೀಕಾಂತ್, ಖಾನಮೇಟ್​​ ಎಂಬ ಪ್ರದೇಶದ ತಮ್ಮನ ಬಾಡಿಗೆ ಮನೆಗೆ ಧಾವಿಸಿದ್ದಾನೆ. ಬಾಗಿಲು ಹಾಕಿದ್ದನ್ನು ಕಂಡುಕೊಂಡ ಶ್ರೀಕಾಂತ್,​ ತಮ್ಮ ಕುಟುಂಬದವರ ಮನೆಗಳು ಸೇರಿದಂತೆ ಇತರ ಪ್ರದೇಶಗಳಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಎಲ್ಲಿಯೂ ಸಂದೀಪ್​ ಪತ್ತೆಯಾಗದ ಕಾರಣ ಕೂಡಲೇ ಮಾದಾಪುರ ಠಾಣೆಯಲ್ಲಿ ದೂರು ದಾಖಲಿದ್ದಾನೆ.

ತನಿಖೆ ಮೇರೆಗೆ ಸಂದೀಪ್​ ಪತ್ತೆಗೆ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net