

ಹೈದರಾಬಾದ್: ಟಾಲಿವುಡ್ ಸ್ಟಾರ್, ಡಾರ್ಲಿಂಗ್(Darling) ಪ್ರಭಾಸ್ ಅವರ ಹುಟ್ಟಹಬ್ಬದ(ಅ.23) ಸಂದರ್ಭದಲ್ಲಿ ಅವರ ಹೊಸ ಚಿತ್ರ 'ಫೌಜಿ' (Fauzi) ಘೋಷಣೆಯಾಗಿದೆ.
ಹೌದು, ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಈ ಚಿತ್ರದ ಮೊದಲ ಲುಕ್ ಟೀಸರ್ ಪೋಸ್ಟರ್ ಬಿಡುಗಡೆಯಾಗಿದ್ದು, ಅದರಲ್ಲಿ ಪ್ರಭಾಸ್ ಅವರ ತೀಕ್ಷ್ಣ ನೋಟದ ಫೋಟೋ ಮತ್ತು ಶಸ್ತ್ರಾಸ್ತ್ರಗಳ ಚಿತ್ರ ಕಾಣುತ್ತಿದ್ದು, ಇದು ಡಾರ್ಲಿಂಗ್ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ.
1940ರ ದಶಕದ ಬ್ರಿಟಿಷ್ ಭಾರತದ ಹಿನ್ನೆಲೆಯಲ್ಲಿ ನಡೆಯುವ ಐತಿಹಾಸಿಕ ಕಥಾವಸ್ತು ಹೊಂದಿದೆ. ಪ್ರಭಾಸ್ ನಾಯಕ ನಟನಾಗಿರುವ ಈ ಚಿತ್ರಕ್ಕೆ ಹನು ರಾಘವಪುಡಿ ನಿರ್ದೇಶನ ಮಾಡುತ್ತಿದ್ದಾರೆ. ಇಮಾನ್ವಿ, ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ಜಯಾ ಪ್ರದಾ ಸೇರಿದಂತೆ ಅನೇಕರ ತಾರಬಳಗವಿದೆ.
ಈ ಘೋಷಣೆಯೊಂದಿಗೆ ಪ್ರಭಾಸ್ ಅವರ ಫ್ಯಾನ್ಸ್ ಸೋಷ್ಯಲ್ ಮೀಡಿಯಾದಲ್ಲಿ ಭರ್ಜರಿ ರೆಸ್ಪನ್ಸ್ ಮಾಡುತ್ತಿದ್ದಾರೆ. ಇದರ ಜೊತೆಗೆ ಅವರ ಇತರ ಚಿತ್ರಗಳಾದ 'ದಿ ರಾಜಾ ಸಾಬ್'ಗೆ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಮೊದಲ ಹಾಡು ಶೀಘ್ರ ರೀಲಿಸ್ ಆಗಲಿದೆ ಎಂದು ನಿರ್ಮಾಣ ಸಂಸ್ಥೆ ಘೋಷಿಸಿದೆ.(ಏಜೆನ್ಸೀಸ್)