ಮಗಳ ಜಾತಕದಲ್ಲಿ ಸಮಸ್ಯೆ ಇದೆ ಎಂದು ಆಕೆಯನ್ನು ಬರ್ಬರವಾಗಿ ಹತ್ಯೆಗೈದ ತಂದೆ

The father brutally end his daughter because there was a problem in her horoscope
Published on

ಹೈದರಾಬಾದ್: ತಂತ್ರಜ್ಞಾನ ಯುಗದಲ್ಲೂ ಜನರು ಮೂಢನಂಬಿಕೆಗಳನ್ನು ಬಿಡುತ್ತಿಲ್ಲ. ಪೂಜೆ, ನರಬಲಿಯಂತಹ ದುಷ್ಕೃತ್ಯಗಳು ನಡೆಯುತ್ತವೆ. ಇತ್ತೀಚೆಗಷ್ಟೇ ಮಗಳ ಜಾತಕ ಚೆನ್ನಾಗಿಲ್ಲ, ಮುಂದೆ ತೊಂದರೆಯಾಗುತ್ತದೆ ಎಂದುಕೊಂಡ ತಂದೆಯೊಬ್ಬ ಮಗಳನ್ನು ಬರ್ಬರವಾಗಿ ಕೊಂದಿದ್ದಾನೆ. ಹೈದರಾಬಾದ್​​ನಲ್ಲಿ ಈ ಘಟನೆ ನಡೆದಿದೆ.

ವಿಜಯವಾಡ ಮೂಲದ ಕುಂದೇಟಿ ಚಂದ್ರಶೇಖರ್ ಮತ್ತು ಹಿಮಬಿಂದು ದಂಪತಿಗೆ ಎಂಟು ವರ್ಷದ ಮೋಕ್ಷಜ ಮಗುವಿದೆ. ಇಬ್ಬರೂ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಚಂದ್ರಶೇಖರ್ ಇತ್ತೀಚೆಗೆ ಕೆಲಸ ಕಳೆದುಕೊಂಡಿದ್ದಾರೆ. ತಾನು ಕೆಲಸ ಕಳೆದುಕೊಂಡಿದ್ದಕ್ಕೆ ಹೆಂಡತಿಯೇ ಕಾರಣ ಎಂದು ಆಕೆಯ ಜೆತೆಗೆ ಆಗಾಗ ಜಗಳವಾಡುತ್ತಿದ್ದ.

ಪತ್ನಿ, ಮಗಳನ್ನು ಕರೆದುಕೊಂಡು ಬಿಎಚ್‌ಇಎಲ್‌ನಲ್ಲಿರುವ ತನ್ನ ಊರಿಗೆ ಹೋಗಿ ವಾಸವಾಗಿದ್ದಳು. ಚಂದ್ರಶೇಖರ್ ವಾರಕ್ಕೆ ಎರಡು ಬಾರಿ ಮಗಳನ್ನು ಭೇಟಿಯಾಗುತ್ತಿದ್ದನು. ಹೀಗೆ ಒಂದು ದಿನ ಮಗಳ ಜಾತಕ ತಿಳಿದಿದೆ. ಮುಂದೆ ಆಕೆ ಕಷ್ಟಗಳನ್ನು ಅನುಭವಿಸುತ್ತಾಳೆ ಎಂದುಕೊಂಡ. ಮಗಳು ಕಷ್ಟ ಪಡಬಾರದು ಎಂದು ಮಗಳನ್ನು ಕೊಲೆ ಮಾಡಲು ಸ್ಕೇಚ್​​ ಹಾಕಿದ್ದನು.

ಆ.18ರಂದು ಸಂಜೆ ಕಾರಿನಲ್ಲಿ ಮೋಕ್ಷಜಾಳನ್ನು ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಎಷ್ಟು ಹೊತ್ತಾದರೂ ಮಗಳು ಶಾಲೆ ಮುಗಿಸಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಮಹಿಳೆಯ ಕುಟುಂಬಸ್ಥರು ಚಂದ್ರಶೇಖರ್ ಗೆ ಕರೆ ಮಾಡಿದ್ದಾರೆ. ಮಗು ಮಲಗಿದೆ ಎಂದು ಹೇಳಿ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ. ಮೃತದೇಹವನ್ನು ಬಿಸಾಡಲು ಜಾಗ ಹುಡುಕುತ್ತಿದ್ದನು. ಇದೇ ವೇಳೆ ರಾತ್ರಿ 10:30ರ ಸುಮಾರಿಗೆ ಕಾರಿನ ಟೈರ್ ಒಡೆದು ಡಿವೈಡರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲಿಯೇ ಇದ್ದವರು ಕಾರಿನಲ್ಲಿ ಮಗುವಿನ ಶವವನ್ನು ಕಂಡು ಡಯಲ್ 100 ಗೆ ಮಾಹಿತಿ ನೀಡಿದರು. ಅದರೊಂದಿಗೆ ಈ ದುಷ್ಕೃತ್ಯ ಬೆಳಕಿಗೆ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net