

ಮುಂಬೈ: ಹಿಂದಿಯ ಯಶಸ್ವಿ ವೆಬ್ಸಿರೀಸ್ಗಳಲ್ಲಿ ಒಂದಾದ ಫ್ಯಾಮಿಲಿ ಮ್ಯಾನ್ ಇದೀಗ ಸೀಸನ್ 2 ಮೂಲಕ ಆಗಮಿಸುತ್ತಿದೆ. ಇಷ್ಟು ದಿನ ಶೂಟಿಂಗ್ ನೆಪ ಹೇಳಿಕೊಂಡೇ ಬಂದಿದ್ದ ತಂಡ, ಇದೀಗ ಕೊನೆಗೂ ಬಿಡುಗಡೆ ಯಾವಾಗ ಎಂಬುದನ್ನು ಹೇಳಿಕೊಂಡಿದೆ. ಈ ಮೂಲಕ ಅಭಿಮಾನಿಗಳಿಗೆ ಕಡೆಗೂ ಹೊಸ ವರ್ಷದ ಸಂದರ್ಭದಲ್ಲಿ ಉಡುಗೊರೆ ನೀಡಿದೆ.
ಇದನ್ನೂ ಓದಿ: ಜಯಶ್ರೀ-ಸಂಯುಕ್ತಾ ಅಜ್ಜಿ-ಮೊಮ್ಮಗಳಾಗಿ
ಈಗಾಗಲೇ ಫ್ಯಾಮಿಲಿ ಮ್ಯಾನ್ ಮೊದಲ ಸೀಸನ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಅದರ ಬೆನ್ನಲ್ಲೇ ಅದರ ಮುಂದುವರಿದ ಭಾಗವಾಗಿ ಸೀಸನ್ 2 ಸಿದ್ಧವಾಗಿದ್ದು, ಫೆಬ್ರವರಿ 12ಕ್ಕೆ ಅಮೆಜಾನ್ ಪ್ರೈಮ್ನಲ್ಲಿ ಬಿತ್ತರವಾಗಲಿದೆ.
ಮನೋಜ್ ಬಾಜಪೇಯಿ ಮುಖ್ಯಭೂಮಿಕೆಯಲ್ಲಿರುವ ಈ ಸರಣಿಗೆ ಈ ಸಲ ಸಮಂತಾ ಅಕ್ಕಿನೇನಿ ಸಾಥ್ ನೀಡಿದ್ದಾರೆ. ಅವರ ಪಾತ್ರವೂ ರಿವೀಲ್ ಆಗಿದ್ದು, ಪಾಕಿಸ್ತಾನದ ಭಯೋತ್ಪಾದಕಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರಂತೆ. ಹಿಂದಿ ಜತೆಗೆ ತಮಿಳು ಮತ್ತು ತೆಲುಗಿನಲ್ಲೂ ಈ ವೆಬ್ ಸರಣಿ ಬಿಡುಗಡೆ ಆಗಲಿದೆ.
ರಾಜ್ ಮತ್ತು ಡಿಕೆ ನಿರ್ದೇಶನದಲ್ಲಿ ದಿ ಫ್ಯಾಮಿಲಿ ಮ್ಯಾನ್ 2 ಸಿದ್ಧವಾಗಿದ್ದು, ಮನೋಜ್ ಬಾಜಪೇಯಿ ಜತೆಗೆ ಪ್ರಿಯಾಮಣಿ ಸಹ ವೆಬ್ಸಿರೀಸ್ನಲ್ಲಿದ್ದಾರೆ.