'ವೀರಂ'ನಲ್ಲಿ ಶಿಷ್ಯ ದೀಪಕ್​ಗೆ ಸ್ಪೈಡರ್ ಲುಕ್!

collage
Published on

ಬೆಂಗಳೂರು: ಪ್ರಜ್ವಲ್ ಅಭಿನಯದ ‘ವೀರಂ’ ಚಿತ್ರದಲ್ಲಿ ಈಗಾಗಲೇ ವಿಶೇಷ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದಾರೆ. ಅವರ ಲುಕ್​ ಸಹ ಕೆಲ ತಿಂಗಳ ಹಿಂದಷ್ಟೇ ವೈರಲ್ ಆಗಿತ್ತು. ಅಷ್ಟೇ ಅಲ್ಲ ಶಿಷ್ಯ ಸಿನಿಮಾ ಖ್ಯಾತಿಯ ದೀಪಕ್ ಸಹ ಈ ಸಿನಿಮಾದಲ್ಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೇ ಹರಿದಾಡಿತ್ತಾದರೂ, ಅವರ ಲುಕ್ ಮಾತ್ರ ಹೊರಬಿದ್ದಿರಲಿಲ್ಲ. ಇದೀಗ ವೀರಂ ಚಿತ್ರದ ನಿರ್ದೇಶಕರು ಅವರ ಮಾಸ್ ಲುಕ್​ನ್ನು ಬಿಹಿರಂಗಪಡಿಸಿದ್ದಾರೆ.

ಜೇಡರ ಬಲೆಯನ್ನೇ ಹೋಲುವ ರೀತಿಯಲ್ಲಿ ಕೂದಲನ್ನು ಕತ್ತರಿಸಿಕೊಂಡಿರುವ ಅವರು, ಕುತ್ತಿಗೆ ಭಾಗದಲ್ಲಿ ಜೇಡದ ಟ್ಯಾಟೂ ಸಹ ಹಾಕಿಸಿಕೊಂಡಿದ್ದಾರೆ. ಸದ್ಯ ಅವರ ಲುಕ್​ ನೋಡಿದರೆ ಈ ಸಿನಿಮಾದಲ್ಲಿ ಖಡಕ್ ಖಳನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದೆನಿಸಿದರೂ, ಅದನ್ನು ಇನ್ನಷ್ಟೇ ಸಿನಿಮಾತಂಡ ಬಹಿರಂಗ ಪಡಿಸಬೇಕು.

ಇನ್ನು ‘ವೀರಂ’ ಚಿತ್ರದಲ್ಲಿ ಪ್ರಜ್ವಲ್ ಜತೆಗೆ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದು, ಇತ್ತೀಚೆಗಷ್ಟೇ ಶಿವಾಜಿನಗರದ ಬೀದಿ ಬದಿಯ ಅಂಗಡಿಗಳಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಶಾಪಿಂಗ್ ಮಾಡಿದ್ದ ವಿಡಿಯೋ ಸಖತ್ ವೈರಲ್ ಆಗಿತ್ತು. ಅದರಂತೆ ಇದೀಗ ಸಿನಿಮಾ ಶೂಟಿಂಗ್​ಗೆ ಚಾಲನೆ ನೀಡಿದೆ. ‘ವೀರಂ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡುತ್ತಿರುವವರು ‘ಖದರ್’ ಕುಮಾರ್. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿದರೆ, ಲವಿತ್ ಛಾಯಾಗ್ರಹಣ ಮಾಡಲಿದ್ದಾರೆ. ಶಶಿಧರ್ ಕೆ.ಎಂ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net