ಕೆಲವರು ತಮ್ಮ ವೃತ್ತಿ ಯಾವುದೇ ಇರಲಿ ಅದನ್ನು ತುಂಬಾ ಪ್ರೀತಿಸುತ್ತಾರೆ. ತಮ್ಮ ಜೀವನಕ್ಕೆ ಆಸರೆಯಾದ ಉದ್ಯೋಗಕ್ಕೆ ವಿಶೇಷ ಗೌರವ ನೀಡಲು ಬಯಸುತ್ತಾರೆ. ಅದೇ ರೀತಿ ಆಟೋ ಚಾಲಕನೊಬ್ಬ ತಮ್ಮ ವೃತ್ತಿಗೆ ತೋರಿದ ಪ್ರೀತಿ ಮತ್ತು ಗೌರವ ಇದೀಗ ಎಲ್ಲರ ಗಮನ ಸೆಳೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಟೋ ಚಾಲಕನ ಮೇಲೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಹೊಸದಾಗಿ ಖರೀದಿಸಿದ ಯಾವುದೇ ವಸ್ತುವಿನ ಮೇಲೆ ಗೀಳು ಇರುತ್ತದೆ. ಆದರೆ ದಿನಗಳು ಕಳೆದಂತೆ ಆ ವಸ್ತುವಿನ ಮೇಲಿನ ಮೋಹ ಕಡಿಮೆಯಾಗುತ್ತಾ ಹೋಗುತ್ತದೆ. ಈ ಸಾಲಿಗೆ ವಾಹನಗಳು ಕೂಡ ಹೊರತಾಗಿಲ್ಲ. ಮನುಷ್ಯನ ಯಶಸ್ಸಿಗೆ ವಾಹನಗಳೇ ಕಾರಣ ಎಂದು ಯಾರೂ ಹೇಳುವುದಿಲ್ಲ. ಕನಿಷ್ಠ ಆ ರೀತಿ ಯೋಚನೆ ಕೂಡ ಮಾಡುವುದಿಲ್ಲ. ಆದರೆ ಕೆಲವರು ಇದಕ್ಕೆ ವಿರುದ್ಧವಾಗಿರುತ್ತಾರೆ. ತಮ್ಮ ವಾಹನಗಳನ್ನ ತುಂಬಾ ಪ್ರೀತಿ ಮಾಡುತ್ತಾರೆ. ಇದಕ್ಕೆ ಉತ್ತಮ ಉದಾಹರಣೆಯೇ ಈ ಆಟೋ ಚಾಲಕ.
ಆಟೋ ಇಲ್ಲದೇ ಹೋಗಿದ್ದರೆ ಸ್ವಂತ ಮನೆಯ ಕನಸು ನನಸಾಗುತ್ತಿರಲಿಲ್ಲ. ಹಾಗಾಗಿ ಆಟೋಗೆ ಅತ್ಯುನ್ನತ ಸ್ಥಾನ ನೀಡಬೇಕೆಂದು ಅಂದುಕೊಂಡಿದ್ದ ಚಾಲಕನೊಬ್ಬ ತನ್ನ ಹೊಸ ಮನೆಯ ಛಾವಣಿಯ ಮೇಲೆ ತನ್ನ ಪ್ರೀತಿಯ ಆಟೋವನ್ನು ಕ್ರೇನ್ ಸಹಾಯದಿಂದ ಇಟ್ಟು ಗೌರವ ಸಲ್ಲಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಆರ್ಯಂತ್ಯೋಗಿವ್ಲೋಗ್ಸ್ ಹೆಸರಿನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಪೋಸ್ಟ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಈವರೆಗೂ ವಿಡಿಯೋ 16 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ.
ತಂದೆ-ತಾಯಿಯನ್ನು ಮರೆಯುತ್ತಿರುವ ಇಂದಿನ ದಿನಗಳಲ್ಲಿ ಈ ರೀತಿಯ ಆಟೋ ಚಾಲಕನಿದ್ದಾನೆ ಎಂಬುದನ್ನು ಕೇಳಿ ನೆಟಿಜನ್‌ಗಳು ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ. ಹಲವು ದಿನಗಳಿಂದ ತಮ್ಮ ಹಾಗೂ ಕುಟುಂಬದ ಜತೆಗಿದ್ದು, ಏಳಿಗೆಗೆ ಕಾರಣವಾದ ಆಟೋಗೆ ಕೃತಜ್ಞತೆ ಸಲ್ಲಿಸಲು ಈ ರೀತಿ ಮಾಡಿದ್ದಾರೆ. ಮೇಲಾಗಿ ಸ್ವಂತ ಮನೆಯ ಕನಸೂ ಸಹ ಈ ಆಟೋ ಚಾಲಕನಿಗೆ ಇರಲಿಲ್ಲ. ಅದಕ್ಕಾಗಿ ಆಟೋ ಓಡಿಸಿ ಬದುಕಿದ್ದಲ್ಲದೆ, ಹೆಚ್ಚು ಹಣ ಉಳಿಸಿ ಮನೆ ಕಟ್ಟಿಕೊಂಡಿದ್ದು, ಆತನ ಸ್ವಂತ ಮನೆ ಕನಸು ಇದೀಗ ನನಸಾಗಿದೆ. (ಏಜೆನ್ಸೀಸ್)
ಗೂಗಲ್ ಸಹ ಸಂಸ್ಥಾಪಕನ ಮಾಜಿ ಪತ್ನಿ ಜತೆ ಎಲಾನ್ ಮಸ್ಕ್ ಸರಸ ಸಲ್ಲಾಪ, ಡೇಂಜರಸ್ ಡ್ರಗ್ ಬಳಕೆ!
ಲುಂಗಿಯುಟ್ಟು ಲಂಡನ್ ಬೀದಿ ಸುತ್ತಿದ ಯುವತಿಯನ್ನು ಕಂಡು ಬ್ರಿಟನ್ ಮಂದಿ ಕೊಟ್ಟ ಪ್ರತಿಕ್ರಿಯೆ ವೈರಲ್!