ನ್ಯೂಯಾರ್ಕ್: ವಿಶ್ವದ ಶ್ರೀಮಂತ ಉದ್ಯಮಿ ಮತ್ತು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕುರಿತ ಸ್ಪೋಟಕ ಸುದ್ದಿಯೊಂದು ಹೊರಬಿದ್ದಿದೆ. ಗೂಗಲ್ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ ಅವರ ಮಾಜಿ ಪತ್ನಿ ವಕೀಲೆ ನಿಕೋಲ್ ಶಾನಹಾನ್ ಜತೆ ಎಲಾನ್ ಮಸ್ಕ್ ಸಂಬಂಧ ಹೊಂದಿದ್ದರು ಮತ್ತು ಖಾಸಗಿ ಪಾರ್ಟಿಯೊಂದರಲ್ಲಿ ಇಬ್ಬರು ಅಪಾಯಕಾರಿ ಕೆಟಾಮೈನ್ ಡ್ರಗ್ ಬಳಸಿದ್ದರು ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಅಲ್ಲದೆ, ನ್ಯೂಯಾರ್ಕ್ ಟೈಮ್ಸ್ ವರದಿಯು ಎಂಟು ವಿಭಿನ್ನ ಮೂಲಗಳನ್ನು ವರದಿಯಲ್ಲಿ ಉಲ್ಲೇಖಿಸಿದೆ.
2021ರಲ್ಲಿ ಶಾನಹಾನ್ ಆಯೋಜಿಸಿದ್ದ ಹುಟ್ಟುಹಬ್ಬದ ಪಾರ್ಟಿಯಲ್ಲಿ ಇಬ್ಬರೂ ಕೆಟಮೈನ್ ಬಳಸಿದ್ದರು ಎಂದು ಹೇಳಲಾಗಿದೆ. ಅದೇ ವರ್ಷ ಆರ್ಟ್ ಬಾಸೆಲ್ ಉತ್ಸವಕ್ಕೆ ಸಂಬಂಧಿಸಿದಂತೆ ಮಸ್ಕ್ ಅವರ ಸಹೋದರ ಕಿಂಬಾಲ್ ಮಸ್ಕ್ ನಡೆಸಿದ ಖಾಸಗಿ ಪಾರ್ಟಿಯಲ್ಲೂ ಕೂಡ ಇಬ್ಬರೂ ಭಾಗವಹಿಸಿದ್ದರು. ಒಟ್ಟು ನಾಲ್ವರು ಈ ಪಾರ್ಟಿಯಲ್ಲಿ ಭಾಗವಸಿದ್ದರು. ಅದರಲ್ಲಿ ಇಬ್ಬರು ಹಲವು ಗಂಟೆಗಳವರೆಗೆ ಕಾಣೆಯಾಗಿದ್ದರು. ಆದರೆ, ಅವರ ಹೆಸರು ಬಹಿರಂಗವಾಗಿಲ್ಲ. ತಾನು ಮಸ್ಕ್ ಜತೆ ಸೆಕ್ಸ್ ಮಾಡಿದ್ದಾಗಿ ಸ್ವತಃ ಶಾನಹಾನ್, ಸೆರ್ಗೆ ಬ್ರಿನ್‌ಗೆ ಬಹಿರಂಗಪಡಿಸಿದ್ದಳು ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
2022ರ ಆರಂಭದಲ್ಲಿ ಮಸ್ಕ್ ಮತ್ತು ಶಾನಹಾನ್ ಸಂಬಂಧದಲ್ಲಿದ್ದರು ಎಂಬ ವರದಿಗಳು ಬಂದಿದ್ದವು. ಆದರೆ ಆಗ ಶಾನಹಾನ್ ಅದನ್ನು ನಿರಾಕರಿಸಿದ್ದರು ಮತ್ತು ಆ ರಾತ್ರಿ ಮಸ್ಕ್ ಜತೆ ತನ್ನ ಮಗಳ ಆಟಿಸಂ ಚಿಕಿತ್ಸೆಯ ಬಗ್ಗೆ ಚರ್ಚಿಸಿದ್ದೆ ಹೊರತು ಬೇರೇನೂ ಇಲ್ಲ ಎಂದು ಶಾನಹಾನ್ ಪ್ರತಿಕ್ರಿಯಿಸಿದ್ದರು. ಅಲ್ಲದೆ, ತನ್ನ ವಿರುದ್ಧ ಕೇಳಿಬಂದ ಆರೋಪಗಳ ಮೇಲೆ ಶಾನಹಾನ್ ಆಕ್ರೋಶ ಹೊರಹಾಕಿದ್ದರು. ತನ್ನ ವೃತ್ತಿಜೀವನವು ಶೈಕ್ಷಣಿಕ ಮತ್ತು ಬೌದ್ಧಿಕ ವಿಶ್ವಾಸಾರ್ಹತೆಯ ಮೇಲೆ ಆಧಾರಿತವಾಗಿದೆ ಎಂದು ಹೇಳಿಕೊಂಡಿದ್ದರು. ಆದರೂ ಶಾನಹಾನ್ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿದ್ದವು.
ಇನ್ನು ಪಾರ್ಟಿಯ ಬಳಿಕ ಶಾನಹನ್ ಮತ್ತು ಸರ್ಗೆ ಬ್ರಿನ್ ಬೇರೆ ಬೇರೆಯಾದರು. ಬ್ರಿನ್ 2022ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಈ ಪ್ರಕ್ರಿಯೆ ಸುಮಾರು 18 ತಿಂಗಳುಗಳ ಕಾಲ ನಡೆಯಿತು ಮತ್ತು ಅಂತಿಮವಾಗಿ ವಿಚ್ಛೇದನ ಸಿಕ್ಕಿತು. ನಿಕೋಲ್ ಶಾನಹಾನ್ ಜತೆ ಎಲೋನ್ ಮಸ್ಕ್ ವಿವಾಹೇತರ ಸಂಬಂಧ ಸುದ್ದಿಯು ಸಾರ್ವಜನಿಕ ಆಸಕ್ತಿ ಮತ್ತು ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ. ಆದರೆ, ಇಬ್ಬರು ಈ ಸುದ್ದಿಗಳನ್ನು ನಿರಾಕರಿಸಿದ್ದಾರೆ. (ಏಜೆನ್ಸೀಸ್)
ಯುವ ಕ್ರಿಕೆಟಿಗನ ಪ್ರೀತಿಯ ಬಲೆಯಲ್ಲಿ ಬಿದ್ರಾ ಕಾವ್ಯಾ ಮಾರನ್!? ಅಸಲಿ ಸಂಗತಿ ಇಲ್ಲಿದೆ…
ಲುಂಗಿಯುಟ್ಟು ಲಂಡನ್ ಬೀದಿ ಸುತ್ತಿದ ಯುವತಿಯನ್ನು ಕಂಡು ಬ್ರಿಟನ್ ಮಂದಿ ಕೊಟ್ಟ ಪ್ರತಿಕ್ರಿಯೆ ವೈರಲ್!