ಪಾತ್ರೆ ತೊಳೆದ ಕತ್ರೀನಾ ಮತ್ತು ಕಾರ್ತಿಕ್: ಹೌಸ್ ಅರೆಸ್ಟ್ ಆಗಿರುವ ತಾರೆಗಳ ಸದ್ಯದ ಸ್ಥಿತಿ ಇದು

katrina kaif 24 mar 20
Published on

ರೊನಾ ಎಂಬ ಮಹಾಮಾರಿ ಎಲ್ಲರನ್ನೂ ಮನೆಯಲ್ಲಿ ಬಂಸಿಬಿಟ್ಟಿದೆ. ಇದಕ್ಕೆ ಬಾಲಿವುಡ್ ಸ್ಟಾರ್‌ಗಳು ಸಹ ಹೊರತಲ್ಲ. ಮನೆಯಿಂದ ಹೊರಹೋಗಲಾರದೆ, ನಾಲ್ಕು ಗೋಡೆಗಳ ಮಧ್ಯೆ ಸೀಮಿತವಾಗಿರುವ ಬಾಲಿವುಡ್ ಸ್ಟಾರ್‌ಗಳು ಪಡುತ್ತಿರುವ ಪಾಡು ಒಂದೆರೆಡಲ್ಲ. ಈಗಾಗಲೇ ಕೆಲವರು ತಾವೇನೇನು ಮಾಡುತ್ತಿದ್ದೀವಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್‌ಗಳನ್ನು ಕೊಡುತ್ತಿದ್ದಾರೆ.

ಈ ಪೈಕಿ ಪ್ರಿಯಾಂಕಾ ಚೋಪ್ರಾ ತಮ್ಮ ಸಮಯವನ್ನು ತಮ್ಮ ಮುದ್ದಿನ ನಾಯಿಯೊಂದಿಗೆ ಕಳೆಯುತ್ತಿದ್ದು, ನಾಯಿಯೊಂದಿಗಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ತಮ್ಮ ಸಮಯವನ್ನು ವಾರ್ಡ್‌ರೋಬ್ ಕ್ಲೀನ್ ಮಾಡುವುದಕ್ಕೆ ಮೀಸಲಿಟ್ಟಿದ್ದಾರೆ. ಅಪ್ಪಟ ಪುಸ್ತಕಪ್ರೇಮಿಯಾಗಿರುವ ಸೈಫ್ ಅಲಿ ಖಾನ್ ಮತ್ತು ಆಲಿಯಾ ಭಟ್ ಎಲ್ಲರಿಂದ ದೂರವಾಗಿ ಪುಸ್ತಕದಲ್ಲಿ ಕಳೆದು ಹೋಗಿದ್ದಾರೆ. ಇದೆಲ್ಲಕ್ಕಿಂತ ಮಜವೆಂದರೆ, ಕತ್ರೀನಾ ಕೈಫ್ , ಶಿಲ್ಪಾ ಶೆಟ್ಟಿ ಮತ್ತು ಕಾರ್ತಿಕ್ ಆರ್ಯನ್ ಅವರ ಕಥೆ. ಈ ಇಬ್ಬರೂ ಏನು ಮಾಡುತ್ತಿದ್ದಾರೆ ಗೊತ್ತಾ? ಮನೆಯಲ್ಲಿ ಪಾತ್ರೆ ತೊಳೆಯುತ್ತಿದ್ದಾರೆ.

ಹೌದು, ಹಾಗಂತ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹೇಳಿಕೊಳ್ಳುವುದರ ಜತೆಗೆ, ಫೋಟೋಗಳನ್ನು ಸಹ ಬಿಡುಗಡೆ ಮಾಡಿದ್ದಾರೆ. ಈ ಇಬ್ಬರೂ ತಮ್ಮ ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಹಳ ದಿನಗಳ ನಂತರ ಮನೆ ಕೆಲಸ ಮಾಡಿದ್ದು ಬಹಳ ಖುಷಿಯಾಯಿತೆಂದು ಕತ್ರೀನಾ ಕೈಫ್ ಅಭಿಪ್ರಾಯಪಟ್ಟರೆ, ಇದು ಮನೆಮನೆಯ ಕಥೆ ಎಂದು ಕಾರ್ತಿಕ್ ಆರ್ಯನ್ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net