

ಬೆಂಗಳೂರು: ಕರೊನಾ ಹುಟ್ಟಿಸಿರುವ ಭೀತಿ ಅಷ್ಟಿಷ್ಟಲ್ಲ. ಅದ್ಯಾವ ಮಟ್ಟಿಗೆ ಅಂದರೆ, ಯಾರ ಮೇಲೂ ಈಗ ನಂಬಿಕೆ ಇಲ್ಲದಂತಾಗಿದೆ. ಅದರಲ್ಲೂ ಪ್ರೇಮಿಗಳು, ದಂಪತಿಗಳು ರೊಮ್ಯಾನ್ಸ್ ಮಾಡುವುದಕ್ಕೂ ಹಿಂದೆ ಮುಂದೆ ನೋಡುವಂತಾಗಿದೆ. ಹೀಗಿರುವಾಗಲೇ ಕೆಲ ತಿಂಗಳ ಹಿಂದಷ್ಟೇ ಮದುವೆಯಾದ ಕಿರುತೆರೆ ನಟಿ ನಿತ್ಯಾ ರಾಮ್, ಕರೊನಾ ನಡುವೆಯೂ ರೊಮ್ಯಾನ್ಸ್ ಮಾಡುವುದು ಹೇಗೆ ಎಂಬುದಕ್ಕೆ ಫೋಟೋ ಮೂಲಕ ಉತ್ತರಿಸಿದ್ದಾರೆ.
ಹೌದು, ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಅಕ್ಕ ನಿತ್ಯಾ ರಾಮ್ ಇನ್ಸ್ಟಾಗ್ರಾಂನಲ್ಲಿ ಪತಿ ಗೌತಮ್ಗೆ ಮಾಸ್ಕ್ ಹಾಕಿ ತಾವೂ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮುತ್ತು ಕೊಡುವ ಮೂಲಕ, ಜವಾಬ್ದಾರಿಯುತವಾಗಿ ರೊಮ್ಯಾನ್ಸ್ ಮಾಡಿ ಎಂದಿದ್ದಾರೆ.
ಈ ಫೋಟೋಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವೊಂದಿಷ್ಟು ಮಂದಿ ಸುರಕ್ಷತೆ ಮುಖ್ಯ ಎಂದರೆ, ಮತ್ತೊಂದಿಷ್ಟು ಮಂದಿ ಓವರ್ ಆ್ಯಕ್ಟಿಂಗ್ ಎಂದು ಕಿಚಾಯಿಸಿದ್ದಾರೆ. ಮತ್ತೆ ಕೆಲವರು 'ಇದನ್ನು ನೋಡಿದರೆ ಮಾಸ್ಕ್ ಕಂಪನಿ ಓನರ್ ಸೂಸೈಡ್ ಮಾಡಿಕೊಳ್ಳುವುದು ಗ್ಯಾರಂಟಿ' ಎಂದು ಕಮೆಂಟಿಸಿದ್ದಾರೆ. ಅಂದಹಾಗೆ, ಡಿಸೆಂಬರ್ ತಿಂಗಳಲ್ಲಿ ಈ ಜೋಡಿ ಗೃಹಸ್ಥಾಶ್ರಮಕ್ಕೆ ಕಾಲಿರಿಸಿತ್ತು.