ಅನಾರೋಗ್ಯಕ್ಕೀಡಾಗಿ ಆತಂಕ ಸೃಷ್ಟಿಸಿದ್ದ ದನ ಸಾವು

Ull_Cow
Published on

ಉಳ್ಳಾಲ: ಸೋಮೇಶ್ವರದಲ್ಲಿ ಅನಾರೋಗ್ಯಕ್ಕೀಡಾಗಿ ದಾರಿಹೋಕರಿಗೆ ತೊಂದರೆ ನೀಡುತ್ತಿದ್ದ ದನವನ್ನು ಸಾರ್ವಜನಿಕರು ಹರಸಾಹಸಪಟ್ಟು ಕಟ್ಟಿಹಾಕಿ ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ದನ ಸಾವನ್ನಪ್ಪಿದೆ. ಸೋಮೇಶ್ವರ ದ್ವಾರದ ಬಳಿಯ ಗಣೇಶ್ ಕಾಜವ ಎಂಬವರು ಸಾಕಿದ್ದ ದನಕ್ಕೆ ಸೋಮವಾರ ರಾತ್ರಿಯಿಂದ ಆನಾರೋಗ್ಯ ಕಾಡಿದೆ. ಮಂಗಳವಾರ ಬೆಳಗ್ಗೆ ದಾರಿಯಲ್ಲಿ ಹೋಗುತ್ತಿದ್ದ ಜನರಿಗೆ ಹಾಯುತ್ತ ಕೊಂಬಿನಿಂದ ಗೋಡೆಗಳಿಗೆ ಗುದ್ದುತ್ತಾ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತ್ತು.

ಇದರಿಂದ ಹೆದರಿದ ಜನರು ಕಷ್ಟಪಟ್ಟು ದನವನ್ನು ಹಿಡಿದು ಕೋಟೆಕಾರಿನ ಪಶು ವೈದ್ಯರನ್ನು ಕರೆಸಿದ್ದು, ಬಳಿಕ ಅನಸ್ತೇಶಿಯಾ ನೀಡಲಾಗಿತ್ತು. ದನಕ್ಕೆ ಹುಚ್ಚು ನಾಯಿ ಕಡಿತದಿಂದ ರೇಬಿಸ್ ಬಂದಿರಬಹುದು ಎಂಬ ಭಯ ಸಾರ್ವಜನಿಕರಿಗೆ ಮೂಡಿತ್ತು. ಆದರೆ ಮೆದುಳು ಜ್ವರ ಬಂದಿರಬಹುದೆಂದು ವೈದ್ಯರು ತಿಳಿಸಿದ್ದರು. ಸಂಜೆ ಬಳಿಕ ದನ ಸಾವಿಗೀಡಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net