

| ಶಾಂತಿನಾಥ ಕೆ. ಹೋತಪೇಟಿ
ಮಾರನೇ ದಿನ ಧನಿಕ ತನ್ನ ಉದ್ಯಮದ ಕೆಲಸಗಾರರನ್ನು ಕರೆದ. ‘ಸತ್ತ ಮೇಲೂ ಸಂಪತ್ತನ್ನು ಜೊತೆಗೆ ತೆಗೆದುಕೊಂಡು ಹೋಗುವ ಸೂತ್ರವನ್ನು ಹೇಳಿದವರಿಗೆ ಒಂದು ಕೋಟಿ ರೂ. ಬಹುಮಾನ ನೀಡುವೆ’ ಎಂದ. ಯಾರೂ ಮಾತನಾಡಲಿಲ್ಲ. ಸಭೆ ಮುಂದೂಡಲಾಯಿತು. ವಾರ ಬಿಟ್ಟು ಮತ್ತೆ ಸಭೆ ಕರೆದ ಧನಿಕ ಮತ್ತೆ ಅದೇ ವಿಷಯ ಮುಂದಿಟ್ಟು, ಐದು ಕೋಟಿ ರೂ. ಬಹುಮಾನ ಎಂದ. ಆದರೆ ಯಾರಿಂದಲೂ ಉತ್ತರ ಬರಲಿಲ್ಲ. ಈ ಸುದ್ದಿ ಊರಲ್ಲೆಲ್ಲ ಹರಡಿತು. ಇದನ್ನು ಕೇಳಿಸಿಕೊಂಡಿದ್ದ ಅಪರಿಚಿತನೊಬ್ಬ ಧನಿಕನ ಬಳಿ ಬಂದು, ‘ನಿಮ್ಮ ಪ್ರಶ್ನೆಗೆ ನನ್ನ ಬಳಿ ಉತ್ತರ ಇದೆ’ ಎಂದ. ಧನಿಕನಿಗೆ ಎಲ್ಲಿಲ್ಲದ ಖುಷಿ ಆಯಿತು. ಸೂತ್ರ ತಿಳಿಸುವಂತೆ ಆಗಂತುಕನಿಗೆ ಹೇಳಿದ. ಆ ಆಗಂತುಕ ಶ್ರೀಮಂತನನ್ನು, ‘ನೀವು ವಿದೇಶಗಳಿಗೆ ಹೋಗಿದ್ದೀರಾ? ಹೋಗುವಾಗ ಹಣ ಹೇಗೆ ಒಯುತ್ತೀರಿ?’ ಎಂದು ಕೇಳಿದ. ‘ನಾನು, ಸಾಕಷ್ಟು ಬಾರಿ ಬೇರೆ ದೇಶ ಸುತ್ತಿದ್ದೇನೆ. ಯಾವ ದೇಶಕ್ಕೆ ಹೋಗುತ್ತೇನೋ ಆ ದೇಶದ ಹಣಕ್ಕೆ ನಮ್ಮ ಹಣವನ್ನು ಬದಲಿಸಿಕೊಂಡರೆ ಆಯಿತು’ ಎಂದ. ‘ನೀವು ಬೇರೆ ದೇಶಗಳಿಗೆ ಹೋಗುವಾಗ ಅಲ್ಲಿನ ಕರೆನ್ಸಿಗೆ ಇಲ್ಲಿನ ರೂಪಾಯಿ ಬದಲಿಸಿಕೊಳ್ಳುವಂತೆಯೇ ಮೇಲೆ ಅಂದರೆ ಸ್ವರ್ಗಕ್ಕೆ ಹೋಗುವಾಗ ನಿಮ್ಮ ಸಂಪತ್ತು ಸ್ವರ್ಗದ ಕರೆನ್ಸಿಗೆ ಬದಲಾಗಬೇಕು. ಪುಣ್ಯ - ಇದು ಸ್ವರ್ಗದ ಕರೆನ್ಸಿ ಆಗಿದೆ. ಇಲ್ಲಿ ನೀವು ದಾನ, ಧರ್ಮ, ಸತ್ಕಾರ್ಯಗಳನ್ನು ಮಾಡಿದರೆ ಮಾತ್ರ ನಿಮ್ಮ ಸಂಪತ್ತಿನ ಬದಲು ಪುಣ್ಯದ ಕರೆನ್ಸಿ ನಿಮ್ಮ ಖಾತೆಗೆ ಜಮೆ ಆಗುತ್ತದೆ. ನೀವು ಮೇಲೆ ಹೋಗುವಾಗ ಈ ಪುಣ್ಯದ ಕರೆನ್ಸಿ ನಿಮ್ಮ ಜೊತೆ ಬರುತ್ತದೆ’ ಎಂದು ಆಗಂತುಕ ಹೇಳಿದ. ಎಚ್ಚೆತ್ತುಕೊಂಡ ಧನಿಕನು ಆ ಕ್ಷಣದಿಂದಲೇ ದಾನ, ಧರ್ಮ, ಸತ್ಕಾರ್ಯ ಮಾಡಲು ಮುಂದಾದ.
(ಲೇಖಕರು ಹವ್ಯಾಸಿ ಬರಹಗಾರರು)
(ಪ್ರತಿಕ್ರಿಯಿಸಿ: manollasavv@gmail.com)