

ಗಂಗೊಳ್ಳಿ: ಮರವಂತೆಯ ಸಾಧನಾ ಸಮಾಜಸೇವಾ ವೇದಿಕೆ ನಲ್ವತ್ತಮೂರು ವರ್ಷಗಳಿಂದ ಕ್ರಿಯಾಶೀಲವಾಗಿ ಮುನ್ನಡೆಯುತ್ತಿರುವುದು ವಿಶೇಷ. ಈ ಅವಧಿಯ ಅದರ ಸಾಧನೆಗಳು, ಊರಿಗೆ ನೀಡಿದ ಕೊಡುಗೆಗಳು ಅದ್ಭುತ ಎಂದು ಮುಖ್ಯ ಶಿಕ್ಷಕ ಎಂ.ಭಾಸ್ಕರ ಮಯ್ಯ ಹೇಳಿದರು.
ಮರವಂತೆ ನೇತಾಜಿ ಸುಭಾಶ್ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಸಾಧನಾ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು. ಸೋಮಯ್ಯ ಬಿಲ್ಲವ ಮಾತನಾಡಿದರು. ಪುಟ್ಟ ಎಂ.ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ದಯಾನಂದ ಬಳೆಗಾರರಿಗೆ ಸಾಧನಾ ಸಮ್ಮಾನ್ ಪ್ರಶಸ್ತಿ ಪ್ರದಾನಿಸಲಾಯಿತು. ಗಣರಾಜ್ಯ ದಿನದಂದು ನಡೆದ ರಾಷ್ಟ್ರಧ್ವಜ ಬಿಡಿಸುವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶ್ರೀವರ್ಷ, ಧನ್ಯತಾ ಶ್ಯಾನುಭಾಗ್, ಜತೀಂದ್ರ ಗಾನಸೌರಭ ಪ್ರಸ್ತುತಪಡಿಸಿದರು. ಎಂ.ಶಂಕರ ಖಾರ್ವಿ ಸ್ವಾಗತಿಸಿದರು. ದೇವಿದಾಸ ಶ್ಯಾನುಭಾಗ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಸೀತಾರಾಮ ಮಡಿವಾಳ ವಂದಿಸಿದರು. ಜತೀಂದ್ರ ಮರವಂತೆ ಕಾರ್ಯಕ್ರಮ ನಿರೂಪಿಸಿದರು. ನಾಗೇಶ ಎಸ್.ರಾವ್, ಬಾಬು ಮಡಿವಾಳ ಸಹಕರಿಸಿದರು.