

ಬಾಗಲಕೋಟೆ: ಬೈಕ್ಗೆ ಟಾಟಾ ಸಫಾರಿ ಡಿಕ್ಕಿ ಹೊಡೆದು ರೈತ ಮೃತಪಟ್ಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅದು ಅಪಘಾತದಿಂದಾದ ಸಾವಲ್ಲ, ಆಸ್ತಿವಿವಾದ ಹಿನ್ನೆಲೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಮತ್ತು ಆತನ ಸಹೋದರ ಸೇರಿ ಕೊಲೆ ಮಾಡಿದ್ದಾರೆ ಎಂಬ ಸತ್ಯ ಬಯಲಾಗಿದೆ.
ಮಡ್ಡೆಸಾಬ್ ಗಲಗಲಿ(55) ಕೊಲೆಯಾದ ವ್ಯಕ್ತಿ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಗೋಟೆಗದ್ಯಾಳ ಗ್ರಾಮದ ಬಳಿಡಿ.8ರಂದು ಟಾಟಾ ಸಫಾರಿ ಕಾರ್ ಅನ್ನು ಬೈಕ್ ಗೆ ಡಿಕ್ಕಿ ಹೊಡೆಸಿ ಕೊಲೆಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ತಿ ವಿವಾದ ಹಿನ್ನೆಲೆ ಕೊಲೆ ಮಾಡಿದ ಪೊಲೀಸ್ ಕಾನ್ಸ್ಟೇಬಲ್ ವಿಜಯಪುರದ ಜಲನಗರ ಠಾಣೆಯ ಮನ್ಸೂರ್ ಅಲಿ ಮತ್ತು ಕೊಲೆಗೆ ಸಾತ್ ನೀಡಿದ್ದ ಆತನ ಸಹೋದರ ಮೆಹಮೂದ್ ನನ್ನು ಸಾವಳಗಿ ಪೊಲೀಸರು ಬಂಧಿಸಿದ್ದಾರೆ.
ಮೊದಲು ಇದನ್ನು ಅಪಘಾತ ಎನ್ನಲಾಗಿದ್ದರೂ, ಬಳಿಕ ಕೊಲೆ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ. ಆರೋಪಿಗಳು ಡಿಕ್ಕಿ ಹೊಡೆದು ಅಪಘಾತ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದು, ಮೊದಲು ಹಿಟ್ ಆ್ಯಂಡ್ ರನ್ ಕೇಸ್ ದಾಖಲಿಸಿಕೊಳ್ಳಲಾಗಿತ್ತು. ಸದ್ಯ ಈಗ ಆರೋಪಿಗಳಿಬ್ಬರೂ ಜೈಲುಪಾಲಾಗಿದ್ದಾರೆ.
ಸಾವಳಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ ಕಾನ್ಸ್ಟೇಬಲ್ ಕರಾಮತ್ತು ಬಯಲಾಗಿದೆ. ಮುದೋಳ ತಾಲೂಕು ಶಿರೋಳ ಗ್ರಾಮದಲ್ಲಿರುವ ಮೂರುವರೆ ಎಕರೆ ಜಮೀನು ವಿವಾದದ ಹಿನ್ನೆಲೆಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.