ಕಲೆಯಲ್ಲೂ ತಂತ್ರಜ್ಞಾನ ಅಳವಡಿಕೆ ಅನಿವಾರ್ಯ

yashaswi
Published on

ಕೋಟ: ಆಧುನಿಕ ತಂತ್ರಜ್ಞಾನ ಬದುಕಿನ ಅವಿಭಾಜ್ಯ ಅಂಗ. ಜೀವನದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡಂತೆ ಕಲೆಯಲ್ಲೂ ತಂತ್ರಜ್ಞಾನ ಅಳವಡಿಕೆ ಅನಿವಾರ್ಯವಾಗಿದೆ. ಗುರುವಿಲ್ಲದೆ ಯಕ್ಷಗಾನ ಕಲಿಕೆ ಸಾಧ್ಯವೆಂಬುದನ್ನು ತೋರಿಸಿದ ಪ್ರಿಯಾಂಕಾ ಕೆ.ಮೋಹನ್ ಅವರ ಸಾಧನೆ ಶ್ಲಾಘನಾರ್ಹ ಎಂದು ಉಪನ್ಯಾಸಕ ಸುಜಯೀಂದ್ರ ಹಂದೆ ಹೇಳಿದರು.

ಯಶಸ್ವಿ ಕಲಾವೃಂದ ಕೊಮೆ ತಕ್ಕಟ್ಟೆ ಆಶ್ರಯದಲ್ಲಿ ತೆಕ್ಕಟ್ಟೆ ಹಯಗ್ರೀವದಲ್ಲಿ ಬೆಂಗಳೂರಿನ ಯಕ್ಷದೇಗುಲ ಹಾಗೂ ಸ್ಕಾೃಚ್ ಸಂಸ್ಥೆಯ ಸಹಯೋಗದಲ್ಲಿ ಯಕ್ಷತಂತ್ರ ನೃತ್ಯಜ್ಞಾನವನ್ನು ಪರಿಚಯಿಸಿ ಮಾತನಾಡಿದರು.

ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಕೋಟ ಸುದರ್ಶನ ಉರಾಳ, ಯಕ್ಷಗುರು ಲಂಬೋದರ ಹೆಗಡೆ ನಿಟ್ಟೂರು, ಪ್ರಿಯಾಂಕಾ ಕೆ.ಮೋಹನ್, ಜ್ಯೋತಿ ಕೆದಲಾಯ, ಸುಜಾತಾ, ಪೂರ್ಣಿಮಾ, ವನಿತಾ ಉಪಾಧ್ಯ, ಶಾರದ ವಿ.ಹೊಳ್ಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net