ಜನರ ನಿರೀಕ್ಷೆ ಉಳಿಸಿದ ಬೈಂದೂರು ಸಂಘ

society
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಜಿಲ್ಲೆಯ ಪ್ರತಿಷ್ಠಿತ ಮತ್ತು ಹಿರಿಯ ಸಹಕಾರಿ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಸಂಘದಲ್ಲಿ ಪಾರದರ್ಶಕ ವ್ಯವಹಾರ ನಡೆಸಿಕೊಂಡು ಹೋಗುವ ಜತೆಗೆ ಭದ್ರತೆ ಮತ್ತು ಭರವಸೆಯಲ್ಲಿ ಜನರ ನಿರೀಕ್ಷೆ ಉಳಿಸಿಕೊಂಡಿರುವ ಸಂತೃಪ್ತಿಯಿದೆ ಎಂದು ಸಂಘದ ಅಧ್ಯಕ್ಷ ಟಿ.ನಾರಾಯಣ ಹೆಗ್ಡೆ ಹೇಳಿದರು.

ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ 4 ಕೋಟಿ ರೂ. ವೆಚ್ಚದಲ್ಲಿ ಯಡ್ತರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ರಧಾನ ಕಚೇರಿ ಕಟ್ಟಡ ಕಾಮಗಾರಿಗೆ ಸೋಮವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಕೇಂಜ ಶ್ರೀಧರ ತಂತ್ರಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾವಿಧಿಗಳು ನಡೆಯಿತು. ಸಂಘದ ನಿರ್ದೇಶಕರಾದ ಸಸಿಹಿತ್ಲು ವೆಂಕಟ ಪೂಜಾರಿ, ಸದಾಶಿವ ಡಿ.ಪಡುವರಿ, ನಾಕಟ್ಟೆ ನಾಗರಾಜ ಶೆಟ್ಟಿ, ಚಿಕ್ಕು ಪೂಜಾರಿ ಶಿರೂರು, ವಸಂತ ಕುಮಾರ್ ಶೆಟ್ಟಿ ಕಳವಾಡಿ, ಎಂ.ಎಚ್.ಗುರುದತ್ತ, ಅರುಣ್ ಕುಮಾರ್ ಶಿರೂರು, ಹೆರಿಯ ದೇವಾಡಿಗ, ಸತೀಶ ಯಡ್ತರೆ, ಶಂಕರ ನಾಯ್ಕ, ಜ್ಯೋತಿ, ವಿಜಯಾ ಶೇರುಗಾರ, ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ಶೆಟ್ಟಿ, ಸದಸ್ಯೆ ಸುಧಾ ಮೊಗವೀರ, ತಾಲೂಕು ರೈತ ಸಂಘದ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ತಾಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಅರವಿಂದ ಪೂಜಾರಿ ನಾಡ, ಸಿಬ್ಬಂದಿ ವರ್ಗ, ಸದಸ್ಯರು ಇದ್ದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಾಪಚಂದ್ರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net