14ರಂದು ನಂದಿಕೂರು ದೇವಸ್ಥಾನದಲ್ಲಿ ಧ್ವಜಾರೋಹಣ

nandi
Published on

ಪಡುಬಿದ್ರಿ: ನಂದಿಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಉತ್ಸವ ಪ್ರಯುಕ್ತ ಮಾ.14ರಂದು ಧ್ವಜಾರೋಹಣ ಹಾಗೂ 18ರಂದು ರಥೋತ್ಸವ ನಡೆಯಲಿದೆ.

14ರಂದು ಬೆಳಗ್ಗೆ ನವಗ್ರಹಯಾಗ, 11 ಗಂಟೆಗೆ ಧ್ವಜಾರೋಹಣ, ನವಕ ಕಲಶಾಭಿಷೇಕ, ಮಹಾಪೂಜೆ, ರಾತ್ರಿ ಅರಸು ಬಲಿ, ಆಯನದ ಬಲಿ ನಡೆಯಲಿದೆ. 15ರಂದು ಸಂಜೆ 4ಕ್ಕೆ ಉತ್ಸವ ಬಲಿ, 4.30ಕ್ಕೆ ಬಡಗು ಸವಾರಿ, 16ರಂದು ಬೆಳಗ್ಗೆ ನವಕ ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಸಂಜೆ 4.30ಕ್ಕೆ ಮೂಡು ಸವಾರಿ ನಡೆಯಲಿದೆ. 17ರಂದು ಸಂಜೆ ಉತ್ಸವ ಬಲಿ, ಕೆರೆದೀಪ, ಚಂದ್ರ ಮಂಡಲ ಉತ್ಸವ, 6ಕ್ಕೆ ಪಡು ಸವಾರಿ, 18ರಂದು ಬೆಳಗ್ಗೆ 11ಕ್ಕೆ ರಥಾರೋಹಣ, ಮಧ್ಯಾಹ್ನ 1ಕ್ಕೆ ಭೂರಿ ಭೋಜನ ಜರುಗಲಿದೆ. ರಾತ್ರಿ ಅಕ್ಷತಾ ದೇವಾಡಿಗ ಅವರಿಂದ ಸ್ಯಾಕ್ಸೋಫೋನ್ ವಾದನ, ಮಹಾರಥೋತ್ಸವ, ಉತ್ಸವ ಬಲಿ, ಕವಾಟ ಬಂಧನ ಸಂಪನ್ನಗೊಳ್ಳಲಿದೆ. 19ರಂದು ಬೆಳಗ್ಗೆ ಕವಾಟೋದ್ಘಾಟನೆ, ತುಲಾಭಾರ, ಸಾರ್ವಜನಿಕ ಹೂವಿನ ಪೂಜೆ, ಸಂಜೆ 6ಕ್ಕೆ ಓಕುಳಿ, ತೆಂಕು ಸವಾರಿ, ಅವಭೃತ ಸ್ನಾನ, ಪಾಲಕಿ ಉತ್ಸವ, ಧ್ವಜಾವರೋಹಣ ಬಳಿಕ ಜಾರಂದಾಯ ದೈವದ ಕೋಲ ಜರುಗಲಿದೆ. 20ರಂದು ಸಂಪ್ರೋಕ್ಷಣೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸಂಜೆ 5ಕ್ಕೆ ರಕ್ತೇಶ್ವರಿ ತಂಬಿಲ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net