

ಬ್ರಹ್ಮಾವರ: ಈ ದೇಶವನ್ನು 3 ತುಂಡು ವಾಡಿದಂತೆ ರಾಷ್ಟ್ರಗೀತೆಯನ್ನು ತುಂಡು ವಾಡಿ ಅಖಂಡತೆಯನ್ನು ತುಂಡು ವಾಡುವ ಕಾರ್ಯ ಇಂದಿಗೂ ನಡೆಯುತ್ತಿದೆ ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಸಹ ಪ್ರಚಾರ ಪ್ರಮುಖ್ ಪ್ರದೀಪ್ ಸರಪಳ್ಳ ಹೇಳಿದರು.
ವಿಶ್ವ ಹಿಂದು ಪರಿಷತ್ ಭಜರಂಗ ದಳ ಬ್ರಹ್ಮಾವರ ಪ್ರಖಂಡ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಶನಿವಾರ ಬ್ರಹ್ಮಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆದ ಪಂಜಿನ ಮೆರವಣಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮೆರವಣಿಗೆಗೆ ಚಾಲನೆ ನೀಡಿದರು.
ದೇವಸ್ಥಾನದಿಂದ ಹೊರಟ ಪಂಜಿನ ಮೆರವಣಿಗೆ ರಥ ಬೀದಿ ಮೂಲಕ ಹಳೆ ಬಸ್ ನಿಲ್ದಾಣ ವಾರ್ಗದಿಂದ ರಾಷ್ಟ್ರೀಯ ಹೆದ್ದಾರಿ 66 ಬಸ್ ನಿಲ್ದಾಣದ ಬಳಿ ಸವಾಪನಗೊಂಡಿತು.
ಜಿಲ್ಲಾ ಸಂಯೋಜಕ ಚೇತನ್ ಪೇರಲ್ಕೆ ಮತ್ತು ನಾನಾ ಪ್ರಮುಖರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ರಾಜೇಶ್ ಶೆಟ್ಟಿ ಬಿರ್ತಿ, ಬ್ರಹ್ಮಾವರ ಪ್ರಖಂಡದ ಭರತ್ ದಾಸ್ ಬಿರ್ತಿ ಇನ್ನಿತರು ಉಪಸ್ಥಿತರಿದ್ದರು.