

My Wife: ತನ್ನ ಪತ್ನಿ ನಾಪತ್ತೆಯಾಗಿರುವ ಬಗ್ಗೆ ದೂರು ವ್ಯಕ್ತಿಯೊಬ್ಬ ಮತ್ತೊಬ್ಬರ ಜತೆ ತನ್ನ ಪತ್ನಿ ಓಡಿಹೋಗಿದ್ದಾಳೆ ಎಂದು ಆರೋಪಿದ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಭಾನುವಾರ ನಡೆದಿದೆ.
ಮೇದಕ್ ನಗರದ ಜೆ.ಪಿ ನಗರದಲ್ಲಿ ಬಿಹಾರ್ ನಿವಾಸಿ ಚಂದನ್ ಕುಮಾರ್ ಎಂಬಾತ ವಾಸ ಮಾಡುತ್ತಿದ್ದಾನೆ. ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಚಂದನ್ ಪತ್ನಿ ಖುಷಿ, ಸೌರಭ್ ಕುಮಾರ್ ಎಂಬಾತನೊಂದಿಗೆ ಸಂಬಂಧ ಹೊಂದಿರುವುದಾಗಿ ಚಂದನ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಇದೇ ಆಗಸ್ಟ್ 12 ರಂದು ಮನೆಯಿಂದ ಹೊರಟುಹೋಗಿದ್ದಾಳೆ. ಇದರಿಂದ ಚಂದನ್ ತನ್ನ ಹೆಂಡತಿಗೆ ಕರೆ ಮಾಡಿದ್ದಾನೆ. ಆದರೆ, ಫೋನ್ ಸ್ವಿಚ್ ಆಫ್ ಆಗಿತ್ತು. ಅನುಮಾನಗೊಂಡ ಚಂದನ್, ಸೌರಭ್ ವಾಸಿಸುತ್ತಿದ್ದ ಮನೆಗೆ ಹೋದಾಗ ಅವಳು ತನ್ನೊಂದಿಗೆ ಇರುವುದು ಕಂಡುಬಂದಿದೆ. ಈ ಹಿನ್ನೆಲೆ ಅವನು ತನ್ನ ಹೆಂಡತಿಯನ್ನು ಕರೆದುಕೊಂಡು ತನ್ನ ಮನೆಗೆ ಬಂದಿದ್ದಾನೆ. ಮನೆಯಲ್ಲಿ ಹೆಂಡತಿಗೆ ಬುದ್ದಿ ಮಾತು ಹೇಳಿದ್ದಾನೆ.
ಆದರೆ. ಅದೇ ದಿನ ಮಧ್ಯರಾತ್ರಿ ಖುಷಿ ಮನೆಯಿಂದ ಓಡಿಹೋಗಿದ್ದಾಳೆ. ಇತ್ತ ಚಂದನ್ ತನ್ನ ಹೆಂಡತಿಯನ್ನು ಹುಡುಕಿದ್ದಾನೆ. ಆದರೆ, ಅವಳು ಸಿಕ್ಕಿಲ್ಲ. ಹೀಗಾಗಿ, ಸೌರಭ್ ಮೇಲೆ ತನಗೆ ಅನುಮಾನವಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.(ಏಜೆನ್ಸೀಸ್)