‘ಆ ದಿನ ನನ್ನ ಕಣ್ಣಲ್ಲಿ ನೀರು ಬಂತು’; ಅಂದು ಪ್ರಭಾಸ್​ ಹೇಳಿದ್ದ ಡೈಲಾಗ್​ ಇದೀಗ ಎಲ್ಲೆಡೆ ವೈರಲ್ ​| Prabhas

Prabhas - Final
Published on

Prabhas | ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಇದೀಗ ಕಲ್ಕಿ ಚಿತ್ರದ ಯಶಸ್ಸಿನ ಬಳಿಕ ಡಾರ್ಲಿಂಗ್ ರಾಜಾಸಾಬ್ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ನಿರ್ದೇಶಕ ಮಾರುತಿ ಈ ಸಿನಿಮಾದ ನಿರ್ದೇಶನ ಮಾಡುತ್ತಿದ್ದು, ಚಿತ್ರೀಕರಣ ಬಹಳ ವೇಗದಲ್ಲಿ ಸಾಗುತ್ತಿದೆ. ಈ ಚಿತ್ರದಲ್ಲಿ ಮಾಳವಿಕಾ ಮೋಹನನ್, ರಿದ್ಧಿ ಕುಮಾರ್ ಮತ್ತು ನಿಧಿ ಅಗರ್ವಾಲ್ ನಾಯಕಿಯರಾಗಿ ನಟಿಸುತ್ತಿದ್ದಾರೆ.

ಸಲಾರ್ 2 ಮತ್ತು ಕಲ್ಕಿ 2 ಜೊತೆ ಪ್ರಭಾಸ್ ಹನು ರಾಘವಪುಡಿ ನಿರ್ದೇಶನದ ಚಿತ್ರದಲ್ಲೂ ಕೆಲಸ ಆರಂಭಿಸಿದ್ದು, ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಪ್ರಭಾಸ್‌ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಾತನಾಡುವಾಗ ಪ್ರಭಾಸ್ ಭಾವುಕರಾಗಿದ್ದು, ಈ ವಿಡಿಯೋದಲ್ಲಿ ಪ್ರಭಾಸ್ ತಮ್ಮ ಮೊದಲ ಚಿತ್ರವಾದ ಈಶ್ವರ್ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

ಈಶ್ವರ ಸಿನಿಮಾ ಪೂಜಾ ಕಾರ್ಯಕ್ರಮದ ಸಮಯದಲ್ಲಿ ಮೊದಲ ಬಾರಿಗೆ ನನ್ನ ಕಣ್ಣಲ್ಲಿ ನೀರು ಬಂತು. ಆ ದಿನ ನಾನು ಒಂದು ಮಾತು ಹೇಳಿದ್ದೆ. ಅದೇನೆಂದರೆ, ಆ ಈಶ್ವರನಿಗೆ ಮೂರು ಕಣ್ಣುಗಳಿವೆ, ಈ ಈಶ್ವರನಿಗೆ ಮೂರು ಹೃದಯಗಳಿವೆ ಎಂದು ನಾನು ಡೈಲಾಗ್​ ಹೇಳಿದ್ದೆ. ಆದ್ರೆ ಆ ಮಾತನ್ನು ಟೆನ್ಷನ್​ನಲ್ಲಿ ಹೇಳಿದ್ದೆ. ಆಮೇಲೆ ಅಪ್ಪ ನನ್ನ ಕೈ ಹಿಡಿದು ಒಂದು ಸಲ ಹೌದು ಎಂದಿದ್ದರು ಎಂದು ಪ್ರಭಾಸ್ ಹೇಳಿದ್ದರು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಉಂಟು ಮಾಡುತ್ತಿದೆ.

ರೆಬೆಲ್ ಸ್ಟಾರ್ ಪ್ರಭಾಸ್ ಕ್ರೇಜ್ ಬಗ್ಗೆ ಹೆಚ್ಚಾಗಿ ಏನೂ ಹೇಳಬೇಕಾಗಿಲ್ಲ. ಪ್ರಭಾಸ್ ಅವರಿಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಪ್ರಭಾಸ್ ಹಲವು ಚಿತ್ರಗಳ ಮೂಲಕ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಸಲಾರ್ ಮತ್ತು ಕಲ್ಕಿ ಚಿತ್ರಗಳೊಂದಿಗೆ ದೊಡ್ಡ ಹಿಟ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಸುಮಾರು ಆರು ವರ್ಷಗಳ ನಂತರ ಪ್ರಭಾಸ್ 'ಸಲಾರ್' ಚಿತ್ರದ ಮೂಲಕ ಹಿಟ್ ಅನುಭವಿಸಿದರು. ಪ್ರಭಾಸ್ ಶೀಘ್ರದಲ್ಲೇ ರಾಜಾ ಸಾಬ್ ಚಿತ್ರದ ಮೂಲಕ ಪ್ರೇಕ್ಷಕರನ್ನು ಸ್ವಾಗತಿಸಲಿದ್ದಾರೆ. ಈ ಹಾರರ್ ಚಿತ್ರದಲ್ಲಿ ಪ್ರಭಾಸ್ ದ್ವಿ-ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದಲ್ಲಿ ಸ್ಪಿರಿಟ್ ಎಂಬ ಚಿತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net