ಉಪ್ಪಿನಿಂದ ಮನೆಗೆ ಸಕಾರಾತ್ಮಕ ಶಕ್ತಿ ಲಭಿಸುತ್ತಾ? ವಾಸ್ತು ಶಾಸ್ತ್ರ ಹೇಳೋದೇನು; salt

Salt
Published on

Vastu | ನಾವು ವಾಸಿಸುವ ಮನೆಗಳಲ್ಲಿ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಸಕಾರಾತ್ಮಕ ಶಕ್ತಿಯನ್ನು ಪಡೆದುಕೊಳ್ಳಲು ವಾಸ್ತು ಶಾಸ್ತ್ರ ಒಂದು ಉಪಯುಕ್ತ ಸಲಹೆಯನ್ನು ನೀಡುತ್ತದೆ. ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಉಪ್ಪನ್ನು ಬಳಸುವುದು ಪ್ರಾಚೀನದಿಂದ ರೂಡಿಯಲ್ಲಿದೆ.

ವಾಸ್ತು ಪ್ರಕಾರ ಉಪ್ಪು ಲಕ್ಷ್ಮಿ ದೇವಿಯ ಪ್ರವೇಶಕ್ಕೆ ಸ್ಥಳಾವಕಾಶ ಸೃಷ್ಟಿಸುತ್ತದೆ ಎಂದು ನಂಬಲಾಗಿದೆ. ಉಪ್ಪು ಸ್ಥಿರತೆ ಮತ್ತು ಸಮೃದ್ಧಿಯನ್ನು ಆಕರ್ಷಿಣೆ ಮಾಡುತ್ತದೆ. ವಿಶೇಷವಾಗಿ ವ್ಯವಹಾರದಲ್ಲಿ ಅಥವಾ ಮನೆಯಲ್ಲಿನ ಶಾಂತಿಗೆ ಉಪ್ಪು ಪ್ರಮುಖ ಭಾಗವಾದ ಭಾಗ ಎನ್ನಲಾಗಿದೆ.

ಉಪ್ಪಿನ ಬಳಕೆಯಿಂದಾಗಿ ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುವುದನ್ನು ತಡೆಯಬಹುದಾಗಿದೆ. ಈ ಉಪ್ಪು ಮನೆಯ ವಾತಾವರಣದಲ್ಲಿ ಶಾಂತಿ ಮತ್ತು ಸಾಮರಸ್ಯ ತಂದುಕೊಡುತ್ತದೆ. ನಕಾರಾತ್ಮಕ ಭಾವನೆಗಳು, ಜಗಳಗಳು ಮತ್ತು ಒತ್ತಡ ಕಡಿಮೆಯಾಗುತ್ತದೆ. ದೈಹಿಕ ಮತ್ತು ಮಾನಸಿಕ ನೆಮ್ಮದಿ ಹೆಚ್ಚಾಗುತ್ತದೆ. ಹಣಕಾಸು ಮತ್ತು ವೃತ್ತಿಗೆ ಸಂಬಂಧಿಸಿದ ಅಡೆತಡೆಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗಿದೆ.

ಉಪ್ಪಿನಿಂದ ಆಗುವ ವಾಸ್ತು ಪ್ರಯೋಜನವೇನು?

Rock Salt (1)

3) ಅಡುಗೆಮನೆಯು ಮನೆಯ ಶಕ್ತಿ ಕೇಂದ್ರ ಬಿಂದುವಾಗಿದೆ, ಇಲ್ಲಿ ಉಪ್ಪನ್ನು ತೆರೆದಿಡುವುದನ್ನು ತಪ್ಪಿಸಬೇಕು ಆದರೆ ಪ್ರತಿ 15 ದಿನಗಳಿಗೊಮ್ಮೆ ಅಡುಗೆಮನೆಯ ಶಕ್ತಿಯನ್ನು ಶುದ್ಧೀಕರಿಸಲು ಉಪ್ಪು ನೀರನ್ನು ಬಳಸಬೇಕು.

2) ಹತ್ತಿ ಬಟ್ಟೆಯಲ್ಲಿ ಸ್ವಲ್ಪ ಉಪ್ಪನ್ನು ತುಂಬಿಸಿ ಸಣ್ಣ ಪ್ಯಾಕೆಟ್ ಮಾಡಿ. ಅದನ್ನು ಮುಖ್ಯ ಬಾಗಿಲಿನ ಒಳಭಾಗದಲ್ಲಿ ನೇತುಹಾಕಿ. ಈ ಉಪ್ಪು ಮನೆಗೆ ಪ್ರವೇಶಿಸುವ ಯಾವುದೇ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ ಮತ್ತು ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ.

1) ಪ್ರತಿ ಬುಧವಾರ ಅಥವಾ ಶನಿವಾರ ಪ್ರವೇಶದ್ವಾರದ ಸುತ್ತಲೂ 3 ರಿಂದ 4 ಬಾರಿ ಉಪ್ಪು ನೀರನ್ನು ಸಿಂಪಡಿಸಿ. ಹೀಗೆ ಮಾಡುವುದರಿಂದ ನಿಮ್ಮ ಮನೆಗೆ ಪ್ರವೇಶಿಸುವ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

(ಏಜೆನ್ಸೀಸ್)

6) ಮನೆಯಲ್ಲಿ ಅಥವಾ ವ್ಯವಹಾರದ ಸ್ಥಳದಲ್ಲಿ ವಾಸ್ತು ದೋಷವಿದ್ದು, ತಕ್ಷಣ ಸರಿಪಡಿಸಲು ಸಾಧ್ಯವಾಗದಿದ್ದರೆ, ಉಪ್ಪು ಪರಿಹಾರವು ಅದಕ್ಕೆ ತಕ್ಷಣದ ಫಲಿತಾಂಶಗಳನ್ನು ನೀಡುತ್ತದೆ. ಉದಾಹರಣೆಗೆ, ಪಶ್ಚಿಮ ದಿಕ್ಕಿನಲ್ಲಿ ರಚನಾತ್ಮಕ ಕೊರತೆಯಿದ್ದರೆ, ಅಲ್ಲಿ ಉಪ್ಪನ್ನು ಇಡುವುದರಿಂದ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಲಾಗಿದೆ.

5) ರಾತ್ರಿ ಸಮಯದಲ್ಲಿ ಹಾಸಿಗೆಯ ಮೂಲೆಯಲ್ಲಿ ವಿಶೇಷವಾಗಿ ನೈಋತ್ಯ ದಿಕ್ಕಿನಲ್ಲಿ ಒಂದು ಸಣ್ಣ ಬಟ್ಟಲು ಉಪ್ಪನ್ನು ಇಡಬಹುದು. ಈ ಪರಿಹಾರವು ದಂಪತಿಗಳಲ್ಲಿ ಮನಸ್ಸಿನ ಶಾಂತಿ, ನಿದ್ರೆಯ ಗುಣಮಟ್ಟ ಮತ್ತು ಸಾಮರಸ್ಯವನ್ನು ತರುತ್ತದೆ.

4) ಉಪ್ಪನ್ನು ಬಳಸಿದ ಮೇಲೆ ಪ್ರತಿದಿನ ಪ್ರವೇಶದ್ವಾರದ ಬಳಿ ದೀಪವನ್ನು ಹಚ್ಚಿರಿ. ಬೆಳಕು ಹಾಗೂ ಶಕ್ತಿ ಎರಡೂ ಕೂಡ ಸ್ನೇಹಿತರಂತೆ. ಜೊತೆಗೆ ಬಾಗಿಲಿನ ಬಳಿ ತುಳಸಿ ಗಿಡ ಅಥವಾ ಶಂಖವನ್ನು ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net