

ಮೂಲ್ಕಿ: ಮೂಲ್ಕಿ ಸೀಮೆಯ ಅರಸು ಕಂಬಳವು ಮಾಗಣೆಯ ಎಲ್ಲ ಕಂಬಳ ಅಭಿವಾನಿಗಳ ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ಯಶಸ್ವಿಯಾಗಿ ನಡೆಯಿತು. ಮುಂದಿನ ದಿನಗಳಲ್ಲಿ ಮಾಗಣೆ ವ್ಯಾಪ್ತಿಯ 32 ಗ್ರಾಮಗಳಲ್ಲಿ ಕೂಡ ಕಂಬಳದ ಬಗ್ಗೆ ಇನ್ನಷ್ಟು ಅರಿವು ಮೂಡಿಸಿ ಯುವಜನತೆ ಇನ್ನಷ್ಟು ಸಕ್ರಿಯವಾಗಿ ಪಾಲು ಪಡೆಯಲು ಕಾರ್ಯಕ್ರಮ ರೂಪಿಸಲಾಗುವುದು ಎಂದು ಮೂಲ್ಕಿ ಸೀಮೆ ಅರಸು ಕಂಬಳ ರೂವಾರಿ ದುಗ್ಗಣ್ಣ ಸಾವಂತ ನುಡಿದರು.
ಮೂಲ್ಕಿ ಸೀಮೆಯ ಅರಸು ಕಂಬಳದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೆ ಕೃತಜ್ಞತಾ ಅರ್ಪಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು ಹಾಗೂ ನಾಯಕರು ಕಂಬಳ ಉತ್ತಮ ರೀತಿಯಲ್ಲಿ ನಡೆದಿದೆ. ಮುಂದಿನ ದಿನಗಳಲ್ಲೂ ಕೂಡ ಅರಮನೆಯ ಎಲ್ಲ ಸಾಮಾಜಿಕ ಕಳವಳಿಯ ಕಾರ್ಯಕ್ರಮದಲ್ಲಿ ನಾವು ಕೈಜೋಡಿಸುತ್ತೇವೆ ಎಂದು ತಿಳಿಸಿದರು.
ವಕೀಲರಾದ ಚಂದ್ರಶೇಖರ್ ಜಿ.ಕಾಸಪ್ಪಯ್ಯ ಮನೆ, ಅರಮನೆಯ ಗೌತಮ್ ಜೈನ್, ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ವಸಂತ ಬರ್ನಾಡ್, ಬಂಕಿ ನಾಯಕರು ಉಪಸ್ಥಿತರಿದ್ದರು.
ನವೀನ್ ಶೆಟ್ಟಿ ಎಡ್ಮೆವಾರ್ ನಿರೂಪಿಸಿದರು.