ಆ ಮೂಲಕ ಸದ್ಯ ಸಂಭಾವನೆ ಪಡೆಯುವುದರಲ್ಲಿಯೂ ನಟ ಒಂದು ದಾಖಲೆಯನ್ನು ಮಾಡಿದ್ದಾರೆ. ಹೌದು, ಕೆಲವು ದಿನಗಳ ಹಿಂದೆ ವಿಜಯ್ ಅವರ #Thalapathy66 ಸಿನಿಮಾ ಒಪ್ಪಿಕೊಂಡಿದ್ದಾರೆ. ತೆಲುಗಿನಲ್ಲಿ ಸೂಪರ್ ಹಿಟ್ ನಿರ್ದೇಶಕ ವಂಶಿ ಪೈಡಿಪಲ್ಲಿ ಅವರು ನಿರ್ದೇಶನ ಮಾಡಲಿರುವ #Thalapathy66ಗೆ ನಿರ್ಮಾಪಕ ದಿಲ್ ರಾಜು ಬಂಡವಾಳ ಹೂಡಲಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಅಂದಹಾಗೆ, 'ಮಾಸ್ಟರ್' ಮತ್ತು 'ಬೀಸ್ಟ್' ಚಿತ್ರಗಳಿಗೆ ಕ್ರಮವಾಗಿ 70, 80 ಕೋಟಿ ಸಂಭಾವನೆ ಪಡೆದರು ನಟ ದಳಪತಿ ವಿಜಯ್.